Transfer Guidelines Karnataka
The Karnataka Government servants Transfer Guidelines
ಸಿಆಸುಇ 12 ಸೇನೌವ 2012,ಬೆಂಗಳೂರು ದಿನಾಂಕ :28-4-2012
- ಪ್ರಕಟಿಸುವಾಗ ಒಂದೆರಡು ಗಂಟೆ ವಿಳಂಬವಾಯಿತು ಕ್ಷಮಿಸಿ. ಇವತ್ತು ಮಧ್ಯಾನ್ಹದ ಹೊತ್ತಿಗಾಗಲೇ ಇದು ಊರೆಲ್ಲಾ ಹರಿದಾಡುತಿತ್ತು. ಆದರೆ ಇದನ್ನು ಹೊರಡಿಸುವ ಶಾಖೆಯನ್ನು ಸಂಪರ್ಕಿಸಿದರೆ ಇನ್ನೂ ಅದು "issue"ಆಗಿಲ್ಲ ಎಂಬ ಉತ್ತರ. ಇಂತಹಾ ಸೋಮಾರಿಗಳು ತುಂಬಿರುವ ಶಾಖೆಯನ್ನು ಇಟ್ಟುಕೊಂಡು ಕಾರ್ಯದರ್ಶಿಗಳು ಅದು ಹೇಗೆ ಕೆಲಸಮಾಡುತ್ತಾರೋ ಶಿವನೇ ಬಲ್ಲ .ಈ ನೀತಿ ಉಲ್ಲೇಖ (೧)ರಲ್ಲಿ ಹೇಳಿರುವ ೨೦೦೧ರ ನೀತಿಯ ಮೇಲೆ ರೂಪಿಸಲ್ಪಟ್ಟಿದೆ.೨೦೦೧ರ ವರ್ಗಾವಣೆ ನೀತಿಯಲ್ಲಿ ರಾಜ್ಯ ಸರ್ಕಾರದ ಇತರ ಎಲ್ಲಾ ನೌಕರರಿಗೆ ಕಟ್ಟುನಿಟ್ಟಿನ ನಿಯಮರೂಪಿಸಲಾಗಿದೆಯಾದರೂ ಸಚಿವಾಲಯದ ನೌಕರರಿಗೆ ಸಂಬಂದಿಸಿದಂತೆ ಕೇವಲ ಮಾರ್ಗಸೂಚಿಯನ್ನು ಮಾತ್ರಾ ನೀಡಲಾಗಿದೆ. ಅಂದರೆ, ವರ್ಗಾವಣೆ ನೀತಿಯಿಂದ ಸಚಿವಾಲಯದ ನೌಕರರನ್ನು ಹೊರತುಪಡಿಸಿಲಾಗಿದೆ .ಈ ಮಾರ್ಗಸೂಚಿಯನ್ನು ಸಹಾ ಕಟ್ಟುನಿಟ್ಟಾಗಿ ಪಾಲಿಸುವ ಸತ್ಸಂಪ್ರದಾಯವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊಂದಿಲ್ಲ.ನಿಜವಾಗಿ ನೋಡಿದರೆ ವರ್ಗಾವಣೆ ನೀತಿಯಿಂದ ತೊಂದರೆಗೊಳಗಾಗುವವರು ಗಂಟುಮೂಟೆ ಕಟ್ಟಿಕೊಂಡು ಊರೂರು ಅಲೆಯುವ ಕ್ಷೇತ್ರ ಇಲಾಖೆಯ ನೌಕರರು. ಇವರುಗಳನ್ನು ಒಂದೇ ಊರಲ್ಲಿ ನೆಮ್ಮದಿಯಾಗಿ ಇರಗೊಡದ ಸರ್ಕಾರದ ವರ್ಗಾವಣೆ ನೀತಿಯು ಸಚಿವಾಲಯದ ಅಯೋಗ್ಯರಿಗೆ ಒಂದೇ ಕಡೆ ಸಂಪಾಗಿ ಇರಲು ಅನುಕೂಲ ಕಲ್ಪಿಸಿರುವುದು ವಿಪರ್ಯಾಸವೇ ಸರಿ. ವರ್ಷಾ ವರ್ಷ ವರ್ಗಾವಣೆ ಆದೇಶ ಹೊರಡಿಸುವ ಈ ಶಾಖೆಯಲ್ಲಿ ಇರುವ ಜನರೇ ವರ್ಷಾನುಗಟ್ಟಲೆ ಇದೆ ಊರಲ್ಲಿ, ಅಲ್ಲಲ್ಲ ಇದೇ ಇಲಾಖೆಯಲ್ಲಿ, ಅಲ್ಲಲ್ಲಾ, ಇದೇ ಶಾಖೆಯಲ್ಲಿ ತಳ ಊರಿದ್ದಾರೆ !. ಹೇಳುವುದು ಆಚಾರ ,ತಿನ್ನುವುದು ಬದನೇಕಾಯಿ ಎಂಬುದನ್ನು ಎಸ್ ವಿ ರಂಗನಾಥ್ ಸಾರಥ್ಯದ ಸರ್ಕಾರ ಮತ್ತೊಮ್ಮೆ ತೋರಿಸಿಕೊಟ್ಟಿದೆ. ಖುದ್ದು ಮುಖ್ಯಕಾರ್ಯದರ್ಶಿಯವರ ಕಚೇರಿಯ ಸಿಬ್ಬಂದಿಗಳೇ ಎಲ್ಲಾ ನೀತಿ ನಿಯಮಗಳನ್ನೂ ಗಾಳಿಗೆ ತೋರಿ ಒಂದೇ ಕಡೆ ಹತ್ತೆಂಟು ವರ್ಷ ತಳ ಊರಿರುವಾಗ ಊರಿಗೆಲ್ಲಾ ವರ್ಗಾವಣೆಯ ನೀತಿ ಹೇಳುವುದು ಯಾವ ಸೀಮೆಯ ಸತ್ಸಂಪ್ರದಾಯ ? .ತನ್ನ ಎಲೆಯಲ್ಲಿ ಕತ್ತೆ ಸತ್ತುಬಿದ್ದಿರುವಾಗ ಇತರರ ಎಲೆಯಲ್ಲಿ ನೊಣ ಬಿದ್ದಿರುವುದನ್ನು ತೋರಿಸುವಂತೆ ಇಲ್ಲಿನ ಸರ್ಕಾರ "ಸಕಾಲ " ಎಂಬ ಕಾಯ್ದೆ ತಂದು ಕ್ಷೇತ್ರ ಇಲಾಖೆಯ ನೌಕರರ ಪ್ರಾಣ ಹಿಂಡುತ್ತಿದೆ. ಇವರ ಪ್ರಕಾರ ಕ್ಷೇತ್ರ ಇಲಾಖೆಯ ನೌಕರರೆಲ್ಲಾ ಮೈಗಳ್ಳರು , ಸಚಿವಾಲಯದವರೆಲ್ಲಾ ಪುಣ್ಯಾತ್ಮರು ! ರಾಜ್ಯ ಸರ್ಕಾರದ ಸಾರಥ್ಯ ವಹಿಸಿರುವ ರಂಗನಾಥ ಸಾಹೇಬರು ಇಲ್ಲಿ ಕತ್ತೆಗಳನ್ನು ಕಟ್ಟಿದ ರಥ ಓಡಿಸಿಕೊಂಡಿರುವದಕ್ಕಿಂತಾ ,ಹಿಂದೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ(April 14,2012 ) ಪ್ರಕಟ ವಾಗಿದ್ದಂತೆ ಕೇಂದ್ರ ಸರ್ಕಾರದ ಸೇವೆಗೆ ಹೋಗಿ ನೆಮ್ಮದಿಯಿಂದ ಇರುವುದು ಶ್ರೀಯುತರಿಗೆ ಶ್ರೇಯಸ್ಕರ !
Karnataka Journal of Pulic Administartion ಕರ್ನಾಟಕ ಆಡಳಿತ ದರ್ಪಣ
SIR WHY UR Always angry about Secretariat Staff. In this Department we are working sincerely.
ReplyDeleteBut I think due to bad experience with some officers of Secretariat, u think entire Secretariat Staff is ineligible persons.
It insulted secretariat staff who are working sincerely .
In most of the organisation,majority of the people are good. I know it is same in secretariat. How ever a handful of bad elements bring bad name to the oraganisation. It is for the people within the secretariatto find and expose the rotten apples.Other wise ,we the people,who see this closely guarded building from outside have no other option but to relay on our own bitter experience.
ReplyDeletehope you are reading.
Pl. let me know who are those sincere worker.Share your experience.
-Editor
Sir pls Provide the Karnataka Govt Secretariat Service Rules.
ReplyDeleteI need it, it is not availabe in Bengaluru book stores.
Pls Provide Karnataka Govt Secretariat Service Rules.
Sir,
ReplyDeletepls inform me whether any employee of Universities in State are not eligible to work under Deputation to in any Dept. or Secretariate to Govt. of Karnataka. if so, pls provide the G.O. The Under Secretary to Govt. Dept. of DPAR(Admn.) as rejected application of university employees.