ಕೆ ಎ ಎಸ್ ಅಧಿಕಾರಿಯಾಗಬೇಕೆ ?,ಅದಕ್ಕೆ ಕೆ ಪಿ ಎಸ್ ಸಿ ಪರೀಕ್ಷೆ ಬರೆಯಲೇ ಬೇಕು ಎಂದೇನಿಲ್ಲ . ಕೆ.ಎ ಟಿ ಎಂಬ ಇನ್ನೊಂದು ಸಂಸ್ಥೆಯ ಮೂಲಕ ಸಹ ನೀವು ಕೆ ಎ ಎಸ್ ಅಧಿಕಾರಿ ಆಗಬಹುದು. ಹೇಗೆ ಸಾಧ್ಯ ಎನ್ನುತ್ತಿರಾ ? .ಅಕ್ಬರ್ ಬೀರಬಲ್ಲರ ಕಥೆ ನೀವು ಓದಿರಬೇಕಲ್ಲವೇ ? ಒಂದುಸಾರಿ ಅಕ್ಬರ್ ಒಂದು ಛತ್ರ ಕಟ್ಟಿಸಿದ್ದನಂತೆ!. ಆಗ ಆ ಊರಿನ ಹಲವು ಬುದ್ಧಿವಂತರು ನಮಗೆ ಕೈ ಸರಿ ಇಲ್ಲಾ , ಕಾಲು ಸರಿ ಇಲ್ಲ ,ಕಿವಿ ಕೇಳಲ್ಲಾ ಅಂತೆಲ್ಲಾ ಕಥೆ ಕಟ್ಟಿ ಕೊಂಡು ಬಂದು ಸೇರಿಕೊಂಡು ಮಜಾ ಉಡಾಯಿಸುತಿದ್ದರಂತೆ. ಬೀರಬಲ್ಲ ಬಂದು ಅವರನ್ನೆಲಾ ಓಡಿಸಿದನಂತೆ.
ಆದರೆ ಈಗ ಬೀರಬಲ್ಲನಂತಹವರು ಸರ್ಕಾರದಲ್ಲಿ ಇಲ್ಲವಲ್ಲಾ. ಹಾಗಾಗಿ ನೀವೂ ಸಹ ಇಲ್ಲಿ ಹೋಗಿ ಸೇರಿಕೊಬಹುದು. ಕೈ ಕಾಲು ಸರಿ ಇದೆ ಅಂತಾ ಚಿಂತೆ ಬೇಡ, ಬೇಕಾಗಿರುವುದು ಒಂದು certificate ಅಷ್ಟೇ .ಆಮೇಲೆ ಕೇಸ್ ಆಡಲು ರೊಕ್ಕ!. ಇವಿದ್ದರೆ ಮುಗೀತು.ನೀವು ಆರಾಮವಾಗಿ ಕೆ.ಎ ಎಸ್. ಅಧಿಕಾರಿಯಾಗಬಹುದು. ಆಮೇಲೆ ನೀವು ಮುಖ್ಯ ಕಾರ್ಯಧರ್ಶಿಯ ಎದುರು ಕುಣಿದು ಕುಪ್ಪಳಿಸಿದ್ರೂ ನೋ ಪ್ರಾಬ್ಲಂ. ಅವರೇನೂ "ಲೇ ಸುಳ್ಳು ಪ್ರಮಾಣಪತ್ರ ಕೊಟ್ಟಿದ್ದಿಯೇನೋ" ಅಂತ ಕೇಳಲ್ಲ.ಯಾಕಂದ್ರೆ ಮುಖ್ಯ ಕಾರ್ಯದರ್ಶಿ, ಕಾರ್ಯದರ್ಶಿ ಮತ್ತು ಇದಕ್ಕೆ ಸಂಬದಿಸಿದ ಅಪರ ಕಾರ್ಯದರ್ಶಿ ಈ ಮೂವರೂ ಮಹಾ ಗಾಂಧಿವಾಧಿಗಳು .ಅದಕ್ಕೆ ಗಾಂಧಿಜಿಯವರ 3 ಮಂಗಗಳು ಇವರ ಆದರ್ಶ.
ಒಂದು ಸಾರಿ ಒಬ್ಬ ಅಜಾನುಬಾಹು ವಿಧಾನ ಸೌದದ ಕಾರೀಡಾರಿನಲ್ಲಿ ಓಡಾಡುತಿದ್ದ.ಎಲಾ ಇವನ ಕಿವಿಗೆ "ಹ್ಯಾಂಡ್ಸ್ ಫ್ರೀ " ಹಾಕಿಕೊಂಡು ಲೈಟಾಗಿ ಡ್ಯಾನ್ಸ್ ಮಾಡಿಕೊಂಡು ಹೋಗ್ತಿದ್ದನಲ್ಲಪ್ಪಾ ,ಇಷ್ಟು ಕುಶಿಯಲ್ಲಿ ಇದ್ದಾನೆ ಅಂದ್ರೆ ಯಾರೋ ಎಂ ಎಲ್ ಎ ಮಗ ಇರ್ಬೇಕು ಅಂದ್ಕೊಂಡೆ!,
ಅದಕ್ಕೆ ಪಕ್ದಲ್ಲಿದ್ದವ್ರು "ರ್ರೀ ...ಸ್ವಾಮೀ ..ಅವ ಎಂ.ಎಲ್.ಎ ಮಗ ಅಲ್ಲ "ಕೆ .ಎ .ಟಿ "ಮಗ ಅಂದಾಗ ನಾನು ತಬ್ಬಿಬ್ಬು