Monday, January 23, 2012

Compassionate appointment Rules

ಅನುಕಂಪದ ಆಧಾರದ ಮೇಲೆ ನೇಮಕಾತಿ ಈಗ ಇನ್ನೂ ಸುಲಭ. ಈಗ ನೇಮಕಾತಿ ಬೇಕಾದರೆ ಸಾಯಬೇಕೆಂದೇನಿಲ್ಲ. ಅನಾರೋಗ್ಯಕ್ಕೆ ಒಳಗಾದರೆ ಸಾಕು. ಆದರೆ ಯಾವ ಯಾವ ಖಾಯಿಲೆ ಬಿದ್ದವರಿಗೆ ಈ ಸೌಲಭ್ಯ ಇದೆ?,ಯಾವ ಮಾನದಂಡಗಳು ಈ ನಿಯಮಕ್ಕೆ ಅನ್ವಯವಾಗುತ್ತದೆ ಎಂಬುದು ಮಾತ್ರ ಇಲ್ಲಿನ ಶಾಖಾಧಿಕಾರಿಗೆ ಗೊತ್ತಿಲ್ಲ. ಇವನನ್ನು ಸರ್ಕಾರ ವರ್ಷಕ್ಕೆ ನಾಲ್ಕು ನಾಲ್ಕು ತರಬೇತಿಗೆ ಕಳುಹಿಸಿದರೂ ಇವನಿಗೆ ಬುದ್ದಿ ಬೆಳೆದಂತಿಲ್ಲ. ತನ್ನ ಶಾಖೆಯಲ್ಲಿ ಆಗಿರುವ ನಿಯಮಗಳ ಬಗ್ಗೆ  ತಿಳುವಳಿಕೆ ಇಲ್ಲ.ಬೇರೆಯವರು ಬರೆದುಕೊಟ್ಟ ಬಾಷಣಗಳನ್ನು ತಪ್ಪುತಪ್ಪಾಗಿ ಓದಿ ಬಿಟ್ಟಿ ಪ್ರಚಾರಕ್ಕೆ ಹಂಬಲಿಸುವುದು, ಉಡಾಫೆ ಮಾತಾಡುವುದೇ  ಇತ್ಯಾದಿ  ಕಪಿಚೇಷ್ಟೆಗಳಲ್ಲೇ ಜೀವನ ಕಳೆಯುತಿದ್ದಾನೆಂದು ಇವನ ಪಕ್ಕದ ಹಿರಿಯ  ಸಹೋದ್ಯೋಗಿಯೊಬ್ಬರ ಅಂಬೋಣ . ಇವನು ಇಂದಿನ ಶಿಥಿಲ ಆಡಳಿತ ವ್ಯವಸ್ಥೆಗೆ ಹಿಡಿದ  ಕೈಗನ್ನಡಿ ಆಗಿದ್ದಾನೆ ಎಂದರೆ ತಪ್ಪಾಗಲಾರದು.ಇರಲಿ , ಈಗ ನಿಯಮದ ವಿಷಯಕ್ಕೆ ಬರೋಣ . ಈ ನಿಯಮದಿಂದ ಕೆ ಪಿ ಎಸ್ ಸಿ ಗೆ ನೌಕರರನ್ನು ಪರೀಕ್ಷೆಯ ಮೂಲಕ ಆರಿಸುವ ಕೆಲಸ ಕಡಿಮೆಯಾಗಲಿದೆ. ಏಕೆಂದರೆ ರಕ್ತ ಪರೀಕ್ಷೆ ,ಮಲ ಪರೀಕ್ಷೆ ,ಹೃದಯ ಪರೀಕ್ಷೆ ಮುಂತಾದ ಪರೀಕ್ಷೆ ಗಳ ಖೊಟ್ಟಿ ಸರ್ಟಿಫಿಕೆಟ್  ನಿಂದಲೇ ಕೆಲಸಗಿಟ್ಟಿಸಲು ಸಾಧ್ಯವಿರುವಾಗ  ಇನ್ನು ಕೆ ಪಿ ಎಸ್ ಸಿ ಪರೀಕ್ಷೆ ಏಕೆ ಬರೆಯಬೇಕು ?, ಅಲ್ಲವೇ ? ತ್ವರೆಮಾಡಿ .. ಈ ಅವಕಾಶ ತಪ್ಪದೆ ಬಳಸಿ ಕೊಳ್ಳಿ!!!!!