ದಿ; ೩೦/೭/೦೯ ರಂದು ವಿಧಾನಸೌಧದ ಕಾನೂನು ಕಾರ್ಯದರ್ಶಿಯ ಕಛೇರಿಯಲ್ಲಿ ನೋಟರಿ ಗಳ ಹುದ್ದೆಗೆ ಇಂಟರ್ವ್ಯೂ ಕರೆಯಲಾಗಿತ್ತು . ಖಾಲಿ ಇದ್ದ ಹುದ್ದೆಗಳ ಸಂಖ್ಯೆ ೫, ಈ ಹುದ್ದೆಗೆ ನೂರಾರು ವಕೀಲರನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು. ಕೊನೆಗೆ ಆ ಎಲ್ಲರನ್ನು ಸಂದರ್ಶನ ಮಾಡಲಾಗದೇ ಕೆಲವರಿಗೆ ಬೇರೆ ದಿನಾಂಕ ನೀಡಲಾಯಿತು. ಒಂದು ದಿನಕ್ಕೆ ಏಷ್ಟು ಜನರನ್ನು interview ಮಾಡಬಹುದು ಎಂಬ ಅಂದಾಜು ಕೂಡ ಇವರಿಗೆ ಇಲ್ಲ.! ಇವರು ನಮ್ಮನ್ನು ಆಳುವವರು, ನಮಗೆ ಕಾನೂನನ್ನು ರೂಪಿಸುವವರು!ಅಲ್ಲ ಸ್ವಾಮಿ ... ಒಬ್ಬ ಅಡಿಗೆಮಾಡುವ ಅನಕ್ಷರಸ್ಥನಿಗೂ ಅಡಿಗೆಗೆ ಎಷ್ಟು ಪ್ರಮಾಣದ ಪದಾರ್ಥಗಳನ್ನು ಹಾಕಬೇಕು ಎನ್ನುವ idea ಇರುತ್ತದೆ ,ಒಬ್ಬ ಗಾರೆಕೆಲಸ ಮಾಡುವವನಿಗೆ ಏಷ್ಟು ಸಿಮೆಂಟು ಹಾಕಬೇಕು? ಏಷ್ಟು ಜಲ್ಲಿ ,sand ಹಾಕಬೇಕು ಎನ್ನುವ ಜ್ಞಾನ ಇರುತ್ತದೆ , ಆದರೆ ಎಲ್ಲರು ನಮಗೆ ನಮಸ್ಕಾರ ಹಾಕಬೇಕು ಎಂದು expect ಮಾಡುವ ಆಧಿಕಾರಿಗಳಿಗೆ ಈ ಜ್ಞಾನ ಇರುವುದಿಲ್ಲ. ಎಲ್ಲಾ arrangements ಕೆಳಗಿನವರು ಮಾಡಿರುತ್ತಾರೆ ನಾವು ಹೋಗಿ ಫ್ಯಾನ್ ಅಡಿ ಕೂತರೆ ಸಾಕು ಎಂಬ attitude ಇವರದು. ನವೆನಿದ್ದ್ರು ದೊಡ್ಡ ಕೆಲಸ ಮಾಡುವವರು ಎಂದು ಹೇಳಿಕೊಂಡು ತಿರುಗುತ್ತಾರೆ .ಅಂಥ ಸಂದರ್ಬ ಬಂದಾಗ ಕೆಲಸ ಮಾಡುವವರು ಕೆಳಗಿನ ಸಿಬ್ಬಂದಿಗಳೇ, ಸಹಿ ಮಾತ್ರ ಇವರದು!