Monday, May 27, 2013

ಅಮಿನ್ ಮಟ್ಟುಗೆ ಕ್ಯಾಬಿನೆಟ್ ದರ್ಜೆ ಸಚಿವರ ಸ್ಥಾನಮಾನ

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಿ ಆದೇಶ ಹೊರಡಿಸುವಂತೆ ಮುಖ್ಯಮಂತ್ರಿಗಳು ಟಿಪ್ಪಣಿ ಕಳುಹಿಸಿದ್ದಾರೆ. ಮುಖ್ಯಮಂತ್ರಿಗಳ "ಮಟ್ಟು ಪ್ರೇಮ " ಅತಿಯಾಯಿತು .ಈತ  ನನಗೆ ಇಂತಹಾ ಕಚೇರಿಯೇ ಬೇಕು ಇಂತಹಾ ಸಂಖ್ಯೆಯ (number plate)ಇನ್ನೋವಾ ಕಾರೇ ಬೇಕು ಎಂದೆಲ್ಲಾ ಟಿಪ್ಪಣಿ ಕಳುಹಿಸುತಿರುತ್ತಾನೆ . ನಾನು ಹತ್ತು ವರ್ಷಗಳಿಂದ ಹಲವು ಮುಖ್ಯಮಂತ್ರಿಗಳ ಹತ್ತಿರ ಕೆಲಸ ಮಾಡಿದ್ದೇನೆ .ಆದರೆ ಮಾಧ್ಯಮ ಸಲಹೆಗಾರರು ಈ ರೀತಿ ಆಡುವುದು ಸರಿಯಲ್ಲ .ಇದು ಸಿ ಎಂ ಅಪ್ರಬುದ್ದತೆ ಎತ್ತಿ ತೋರಿಸುತ್ತದೆ ಎಂದು ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಕಚೇರಿಯ ನೌಕರರೊಬ್ಬರು ಟೀಕಿಸಿದ್ದಾರೆ .

Transfer Guidelines 2013-14 coming soon

ಈ ವರ್ಷದ ವರ್ಗಾವಣೆ ನೀತಿಯನ್ನು ಹೊರಡಿಸುವ ಬಗ್ಗೆ ಸಚಿವ ಸಂಪುಟದ ನಿರ್ಧಾರ ಆಗಿದೆ. ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು



The Karnataka Government servants Transfer Guidelines 2013-14


Karnataka Journal of Pulic Administartion  ಕರ್ನಾಟಕ ಆಡಳಿತ ದರ್ಪಣ

Saturday, May 11, 2013

ಆಯಕಟ್ಟಿನ ಸ್ತಳಗಳನ್ನು ಆಕ್ರಮಿಸಲು ಲಾಭಿ ಆರಂಭ


ರಾಜ್ಯದ ರಾಜಕೀಯ ಚಿತ್ರಣ ಬದಲಾಗಿದೆ. ಈ ಹಿಂದಿನ ಐದು ವರ್ಷಗಳಲ್ಲಿ ಹೇಳಹೆಸರಿಲ್ಲದೆ ಮಾಯವಾಗಿದ್ದ ಹಲವು ಮುಖಗಳು ವಿಧಾನಸೌದದ ಮೊಗಸಾಲೆಯಲ್ಲಿ ಕಾಣತೊಡಗಿವೆ. ಅದೇನೋ ಸಹಜವೇ .ಆದರೆ ಬದಲಾದ ಪರಿಸ್ತಿತಿಯಲ್ಲೋ ಬದಲಾಗದ ಒಂದು ಗುಂಪು ಮಾತ್ರ ಕಮೋಡಿಗೆ ಅಂಟಿದ ಮಲದಂತೆ ವಿಧಾನಸೌದದ ಮೂರನೇ ಮಹಡಿಗೆ ಅಂಟಿಕೊಂಡಿರುವುದು ಒಂದು ಸೋಜಿಗ, ಸರ್ಕಾರ ಯಾವುದೇ ಬರಲಿ , ಪ್ರಧಾನ ಕಾರ್ಯದರ್ಶಿ /ಕಾರ್ಯದರ್ಶಿ ಯಾವುದೇ ಇರಲಿ ಕಚೇರಿ ಮಾತ್ರ ಗುರುತಿಸಿಕೊಳ್ಳುವುದು ಕೆಲವೇ ಕೆಲವು ವ್ಯಕ್ತಿಗಳಿಂದ. ಉದಾಹರಣೆಗೆ ಸಿಆಸುಇ  ಇತ್ಯಾದಿ ಇಲಾಖೆಗಳ ಕಾರ್ಯದರ್ಶಿ ಎಂದರೆ ಕೆಲವು ಹೆಸರು .ಉಪಕಾರ್ಯದರ್ಶಿ ಸೇವೆಗಳು ಎಂದರೆ ಕೆಲವು ಹೆಸರು ,ಎ ಸಿ ಎಸ್ ಖಚೇರಿ ಅಂದರೆ ಕೆಲವು  ಹೆಸರು ,ಮುಖ್ಯಕಾರ್ಯದರ್ಶಿ ಖಚೇರಿ ಎಂದರೆ ಕೆಲವು  ಹೆಸರು,ಅಷ್ಟೇ ಏಕೆ ಮುಖ್ಯ ಮಂತ್ರಿ ಕಚೇರಿ ಎಂದರೆ ಕೆಲವು ಹೆಸರು ಲಾಗಾಯ್ತಿನಿಂದಲೂ ಚಾಲ್ತಿಯಲ್ಲಿದೆ. ಒಳಗಿನ ಸಾಹೇಬರು ಬದಲಾದರೂ ಈ ದಂದೆಕೊರರು ಬದಲಾಗುವುದಿಲ್ಲ. ಚಾಡಿ ,ಕುತಂತ್ರ  ಮಾಹಿತಿಯ  ಮಾರಾಟ ಇವರುಗಳ ಅಸಲಿ ದಂಧೆ. ಗೆಲ್ಲುವ ಕುದುರೆಯ ಬಾಲ ಹಿಡಿಯುವುದು ,ಸೋತವರನ್ನು ಸಹ ಚೆನ್ನಾಗಿ ನೋಡಿಕೊಂಡು ಅವರಿಂದ ಮುಂದೆ ಆಗಬಹುದಾದ ಉಪಯೋಗವನ್ನು ಲೆಕ್ಕ ಹಾಕುವುದು ಇವರ ಕಲಾನೈಪುಣ್ಯ .ಹಿಂದಿನಿಂದ ಆ ಕಚೇರಿಯಲ್ಲಿ ಇರುವವರನ್ನು ಒದ್ದೋಡಿಸಿ ಹೊಸಬರನ್ನು ನೇಮಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕುವ ಇಚ್ಛಾಶಕ್ತಿ ಕೂಡ ಅಧಿಕಾರಿಗಳಿಗೆ  ಇರುವುದಿಲ್ಲ..ಮೋಸ,ವಂಚನೆ ವ್ಯಭಿಚಾರಗಳ ಬಲವಾದ ಬಲೆಯನ್ನು ನೇಯ್ದು ಬೇರುಬಿಟ್ಟಿರುವ  ಈ ತಂಡದ ಜಾಲಕ್ಕೆ ಹೊಸ ಸರ್ಕಾರ ಸಹಾ ಬಲಿಯಾಗುವ ಸಾಧ್ಯತೆ ಇವೆ. ಸೈನ್ಯದಲ್ಲಿ ತಮ್ಮ ಶೌರ್ಯ ತೋರಿಸಿದವರಿಗೆ  ವೀರಚಕ್ರ ಪರಮ ವೀರ ಚಕ್ರ ಇತ್ಯಾದಿ ಪ್ರಶಸ್ತಿ ನೀಡಿದಂತೆ , ಮೋಸ,ವಂಚನೆ ವ್ಯಭಿಚಾರಗಳಲ್ಲಿ ತಮ್ಮ ಪ್ರತಿಭೆ ಮೆರೆಯುವ ಹಾಲಿ /ನಿವೃತ್ತ ಸರ್ಕಾರಿ ನೌಕರರಿಗೆ  ಸ್ಪೆಷಲ್ ಆಫೀಸರ್ , ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ ಇತ್ಯಾದಿ ಪದವಿ ನೀಡಿ  ತಮ್ಮ ಕಚೇರಿಯನ್ನು ಅಲಂಕರಿಸಿಕೊಳ್ಳುವ ಖಯಾಲಿ ಹಲವು ಅಧಿಕಾರಿ/ಸಚಿವರುಗಳಿಗಿದೆ . ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ ತಕ್ಷಣ ಅವರ್ಯಾರದೋ ಕಾಲು ಹಿಡಿದು @& ಚೀಪಿ  ಮಿನಿಸ್ಟರ್ ಆಫೀಸ್ ಗಳಲ್ಲೇ ಮುಂದುವರೆಯುವ ಹಲವು ಮಂದಿ ವಿಧಾನ ಸೌದದಲ್ಲಿದ್ದಾರೆ. ಈಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಆಯಕಟ್ಟಿನ ಸ್ತಳಗಳನ್ನು ಆಕ್ರಮಿಸಲು ಲಾಭಿ ಆರಂಬವಾಗಿದೆ. ಯಾರು ಸಚಿವರಾಗಬಹುದು, ನಮ್ಮ ಜಾತಿಯವರು ಯಾರು? ಯಾರ್ಯಾರಿಗೆ ಯಾರ್ಯಾರು ಆಪ್ತರು? ಅವರ ದೌರ್ಬಲ್ಯ ಗಳೇನು  ಇತ್ಯಾದಿ ಮಾಹಿತಿ ಸಂಗ್ರಹಣೆ ಕಾರ್ಯ ಈಗಾಗಲೇ ಆರಂಭವಾಗಿದೆ. ಮುಖ್ಯಮಂತ್ರಿಗಳ ಕಚೇರಿಗೆ ಸೇರಿಕೊಳ್ಳಲು  ಹಲವು ನಿವೃತ್ತ ಅಧಿಕಾರಿಗಳು ಲಾಬಿ ಆರಂಬಿಸಿದ್ದಾರೆ .ಈ ಹಿಂದೆ ಮುಖ್ಯಮಂತ್ರಿ/ಮುಖ್ಯಕಾರ್ಯದರ್ಶಿ  ಕಚೇರಿಯಲ್ಲಿ  ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ಅನಗತ್ಯವಾಗಿ ತುಂಬಿಕೊಂಡಿರುವ ಬಗ್ಗೆ& ಅದರಿಂದ ಬೊಕ್ಕಸಕ್ಕೆ ಆಗುವ ನಷ್ಟದ ಬಗ್ಗೆ ಮಾಧ್ಯಮದಲ್ಲಿ ಚರ್ಚೆಯಾದರೂ ಸಹ ಅದರ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ. ಕಾರಣ  ಒಳಗಿನ ಸಾಹೇಬರು ಏನು ನೋಡಬೇಕು ಏನು ನೋಡಬಾರದು ಎಂಬುದನ್ನು ಇದೇ ತಲೆಹಿಡುಕ ವರ್ಗ ನಿಯಂತ್ರಿಸುತಿದ್ದುದರಿಂದ ಸಾಹೆಬರುಗಳು ವಾಸ್ತವತೆಯಿಂದ ದೂರವಾಗಿ ಬದುಕಲಾರಮ್ಬಿಸಿದರು. ಜನರಿಂದ ಬರುವ ಅರ್ಜಿಗಳ ಮೇಲೆ ಸಹಿಮಾಡಿ ಅದನ್ನು ಸಾಹೆಬರು  ನೋಡಿದ್ದರೆಂದೋ ,ಸಾಹೇಬರು ಆದೇಶಿಸಿದ್ದರೆಂದೋ ಬರೆದು ಅದನ್ನು ಯಾವುದು ಒಂದು ಇಲಾಖೆಗೆ ಎತ್ತಿಹಾಕುವ  ಪ್ರವೃತ್ತಿಯನ್ನು ಆಪ್ತ ಕಾರ್ಯದರ್ಶಿಗಳು ಬೆಳೆಸಿಕೊಂಡರು.ಬಿಜೆಪಿ ಸರ್ಕಾರದ  ಮೂಗಿನಡಿ ಕುಳಿತು ಎಷ್ಟೋಜನ ಮೀರ್ ಸಾದಿಕ್ ಕೆಲಸ ಮಾಡಿದ್ದೂ  ಸಹಾ ಬಿಜೆಪಿ ಸರ್ಕಾರಕ್ಕೆ ಮುಳುವಾಗಿ ಪರಿಣಮಿಸಿತ್ತು. ಯಡಿಯೂರಪ್ಪ ,ಸದಾನಂದ ಗೌಡ , ಶೆಟ್ಟರ್ ಗಳ ನಡುವೆ   ಗೊಂದಲ ಉಂಟಾದದ್ದು ಸಹಾ ಈ ಅಪ್ತರ ಕೈಚಳಕದಿಂದಲೇ. ಈಗ ಮತ್ತೆ ಲಾಬಿ ಆರಂಭ ಆಗಿದೆ. ನಿವೃತ್ತ ನೌಕರರನ್ನು ನೇಮಿಸಿಕೊಳ್ಳುವ ಬಗ್ಗೆ ಸುತ್ತೋಲೆ ಇದ್ದಾಗ್ಯೂ  ಸಹ ಸಚಿವ ಸಂಪುಟ ದಲ್ಲಿ ಲಾಬಿ ನಡೆಸಿ ಹಲವರು ಸೇವೆಗೆ ನೇಮಕಗೊಳ್ಳಲಿದ್ದಾರೆ .ಯಡ್ಡಿ ಹೋದರೂ ಸಿದ್ದ ಬಂದರೂ  ದುರಾಡಳಿತ ಮಾತ್ರ ಮುಂದುವರೆಯಲಿದೆ.