Wednesday, September 23, 2009

ಆಯುಧ ಪೂಜೆ ಎಂಬ ಲಂಚ ಮೇಳ

ಆಯುಧ ಪೂಜೆ ಎಂಬ ಹಬ್ಬ ಒಂದಿದೆ.ಹಿಂದೆ ಏನಾದರು ಒಂದು ಹೊಸ ಯಂತ್ರವನ್ನು ಕಂಡಾಗ ಜನ ವಿಸ್ಮಿತರಾಗಿ ಇದು ದೇವರೇ ಇರಬೇಕು ಎಂದು ಅದಕ್ಕೆ ತಲೆಬಾಗುವುದನ್ನು ನೋಡಿ ಕೆಲವು ಕಿಲಾಡಿ ಪೂಜಾರಿಗಳು ಕಂಡು ಹಿಡಿದ ಹಬ್ಬ ಇದು. ಏನೇ ಇರಲಿ ,ಜನರ ನಂಬಿಕೆ ಅವರ ವೈಯುಕ್ತಿಕ ವಿಚಾರ .ಅದಕ್ಕೆ ಸರ್ಕಾರವು ಒಂದು ದಿನ ರಜೆಯನ್ನೂ ಸಹ ನೀಡುತ್ತದೆ. ಆದರೆ ಸರ್ಕಾರದ ನೌಕರರು ಕೆಲಸದ ವೇಳೆಯಲ್ಲೇ ಪೂಜೆ ಹಮ್ಮಿಕೊಳ್ಳುತ್ತಾರೆ. ಇದೊಂದು ರೀತಿಯ ಸಮೂಹ ಸನ್ನಿ. ಎಲ್ಲರಿಂದಲೂ ಹಣ ಸಂಗ್ರಹಿಸಲಾಗುತ್ತದೆ. ಕಚೇರಿಗೆ ಬಂದವರ ಬಳಿ ಲಂಚ್ ಪೀಕಿಸಲು ಇದೊಂದು ನೆಪ ಅಷ್ಟೆ. ಇಒಂದು ಅರ್ಥದಲ್ಲಿ ಇದು "ಜವಾನರಿಂದ ಜವಾನರಿಗಾಗಿಯೇ ನಡೆಯುವ ಪೂಜೆ' ಕೆಲವು ಜವಾನ ಮನೋವೃತ್ತಿಯ ಗುಮಸ್ತರೂ ,ಅಧಿಕಾರಿಗಳು ಇದರೊಂದಿಗೆ ಸೇರಿಕೊಳ್ಳುತ್ತಾರೆ ಅಷ್ಟೆ.ಹಿಂದೆ ಹರೀಶ್ ಗೌಡರು ವಾಣಿಜ್ಯ ತೆರಿಗೆಯಲಿ ಇದ್ದಾಗ ಯಾವುದೇ ಪೂಜೆ ಮಾಡಬಾರದು ಎಂದು ಸುತ್ತೋಲೆ ಹೊರಡಿಸಿದ್ದರಂತೆ. ಇಂತಹ ಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಬೇಕು. ಈ ಕೆಲಸ ಮಾಡ ಬೇಕಾಗಿ ಇರುವುದು DPAR ಎಂಬ ಇಲಾಖೆ. ಆದರೆ ಇದು ನರ ಸತ್ತ ಇಲಾಖೆ.ಲೋಕಸೇವ ಆಯೋಗದಿಂದ ಆಯ್ಕೆ ಆಗಿ ಬಂದವರಿಗೆ ನೇಮಕಾತಿ ಆದೇಶ ನೀಡಲೂ ಲಂಚ ಕೇಳುತ್ತಾರೆ. ವಿಧಾನಸೌಧದಲ್ಲಿ ನೌಕರರ ಕೊರತೆ ಇದ್ದರೂ ಆಯೋಗದಿಂದ ಆಯ್ಕೆಯಾದ ಅಭ್ಯರ್ಥಿಗಳು ಬಹುಮಹಡಿ ಕಟ್ಟಡಕ್ಕೆ ಸುತ್ತಿ ಸುತ್ತಿ ಮೆಟ್ಟು ಹರಿದಿದೆಯೇ ಹೊರತು ನೇಮಕ ಆಗಿಲ್ಲ. (ಈಗ ಲಂಚ ನೀಡಿ ನೇಮಕಾತಿ ಆದೇಶ ಪಡೆದಿರಲೂಬಹುದು).
ಸರ್ಕಾರದ ನೌಕರರ ನಡತೆ ಹೇಗಿರಬೇಕು ಎಂಬ ಬಗ್ಗೆ 1966 ರಲ್ಲಿ ನಡತೆ ನಿಯಮಗಳನ್ನು ಮಾಡಿರುವುದನ್ನು ಬಿಟ್ಟರೆ ಇನ್ನೇನೂ ಮಾಡಿಲ್ಲ. ಆಯುಧ ಪೂಜೆಯ ದಿನ ಆ ವಿಬಾಗದವರೇ ಪೂಜೆ ಮಾಡಿದಾಗ ನಡತೆ ನಿಯಮವನ್ನು ಕೈ ಒರೆಸಲು ಉಪಯೋಗಿಸುತ್ತಾರೆ!!!. ಬೇಕಾದರೆ ದಿನಾಂಕ :26/9/09 ರಂದು ವಿಧಾನ ಸೌಧಕ್ಕೆ ಬಂದು ನೋಡಿ.
ಪೂಜೆಯನ್ನು ಆಫಿಸಿನಲ್ಲೀ ಮಾಡುವುದಾದರೆ ರಜ ನೀಡುವ ಅಗತ್ಯ ಏನು?,
ಬೇರೆಕಡೆ ಅಂದರೆ ಮಿಶಿನ್ ಗಳಿರುವ ಕಡೆ ಪಂಪ್ ಹೌಸ್ ಇತ್ಯಾದಿ ಇರುವ ಕಡೆ ನೌಕರರಿಗೆ ಬಯ ಇರುತ್ತದೆ. ಅದಕ್ಕೆ ಪೂಜೆ ಮಾಡುತ್ತಾರೆ, ಆದರೆ ವಿಧಾನ ಸೌಧದಲ್ಲಿ ಏನಿದೆ, ಬರೀ ತುಕ್ಕು ಹಿಡಿದ ಮೆದುಳುಗಳು ? ಇಲ್ಲೂ ಪೂಜೆ ಮಾಡಬೇಕೆ?, ಹಾಗೆ ಮಾಡುವುದಾದರೆ holiday ದಿನದಲ್ಲಿ ಮಾಡಬೇಕೆ ಹೊರತು working days ನಲ್ಲಿ ಅಲ್ಲ ಎಂದು ಸರ್ಕಾರದ ಕಾರ್ಯದರ್ಶಿಗಳು ಸೂಚನೆ ಕೊಡಬೇಕು ಅಥವಾ ನಡತೆ ನಿಯಮ ಎಂಬ ಹಲ್ಲಿಲ್ಲದ ಹಾವನ್ನು ಕಿತ್ತು ಹಾಕಬೇಕು.ಇಲ್ಲದಿದ್ದರೆ ಅದು ಮುಗ್ದ ನೌಕರರ ಮೇಲೆ ಮಾತ್ರ ಸೆಲೆಕ್ಟಿವ್ಆಗಿ ಬಳಕೆ ಯಾಗುತ್ತದಷ್ಟೇ..ಈ ಪಿಡುಗನ್ನು ನಿವಾರಿಸಲು ನೀವು ಇಷ್ಟ ಪಟ್ಟರೆ ನೀವು ಮಾಡ ಬೇಕಾಗಿರುವುದು ಇಷ್ಟೇ .....
ಈ ಕೆಳಕಂಡಂತೆ ಒಂದು R T I ಅರ್ಜಿಯನ್ನು ಸಿಬ್ಬಂದಿ ಮತ್ತು ಆಡಳಿತಾ ಸುಧಾರಣಾ ಇಲಾಖೆಯ ಕಾರ್ಯದರ್ಶಿಯವರಿಗೆ ಸಲ್ಲಿಸುವುದು..
ಕೇಳಬೇಕಾದ ಪ್ರಶ್ನೆಗಳು-
1)ಸರ್ಕಾರದ ಸಚಿವಾಲಯದ ವಿವಿಧ ಇಲಾಖೆಗಳಲ್ಲಿ /ಶಾಖೆಗಳಲ್ಲಿ ಆಯುಧಪೂಜೆ ನಡೆಸಬೇಕಾದಲ್ಲಿ ಅದಕ್ಕೆ ಸರ್ಕಾರದ ಪೂರ್ವಾನುಮತಿ ಪಡೆಯುವ ಅಗತ್ಯ ಇದೆಯೇ?ಈ ರೀತಿಯ ಅನುಮತಿ ನೀಡಲು ಯಾವ ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ?
೨)ನಿಮ್ಮ ವ್ಯಾಪ್ತಿಯಲ್ಲಿ ಬರುವ ಕಛೇರಿಗಳಲ್ಲಿ /ಶಾಖೆಗಳಲ್ಲಿ ಆಯುಧ ಪೂಜೆ ನಡೆಸಲು ಅನುಮತಿ ನೀಡಲಾಗಿದೆಯೇ? 3
3)ಅನುಮತಿ ಇಲ್ಲದೆ ಸಿಬ್ಬಂದಿಗಳು ಪೂಜೆ ನಡೆಸಿದಲ್ಲಿ ಯಾವ ಕ್ರಮ ಕೈಗೊಳ್ಳಬಹುದು ?

No comments:

Post a Comment