ಕಲಿಸಿದ ವಿಷಯದ ಬಗ್ಗೆ ಪರೀಕ್ಷೆ ಮಾಡುವುದು ಸಹಜ
ಆದರೆ ....ಯಾವ ಸರ್ಕಾರೀ ಶಾಲೆಯೂ ಕಲಿಸದ ಕಂಪ್ಯೂಟರ್ ಬಗ್ಗೆ ನಾವು ಪರೀಕ್ಷೆ ಮಾಡುತ್ತೇವೆ ,ಅದರಲ್ಲಿ ಪಾಸಾದರೆ ಮಾತ್ರ ಸರ್ಕಾರಿ ಕೆಲಸ ಕೊಡುತ್ತೇವೆ ಅಂತಾರಲ್ಲಾ ...ಈ ಬದ್ದಿಮಕ್ಕಳು... ,ನಮ್ಮ ಹಳ್ಳಿಗಳಲ್ಲಿ ಇವರಪ್ಪ ಬಂದು ಕಂಪ್ಯೂಟರ್ ಕಲಿಸುತ್ತಾನೆಯೇ? ,
ಅದರಲ್ಲೂ ಇವರು ಕೊಡೊ ದರಿದ್ರ ಕೆಲಸಕ್ಕೆ ಅಪ್ಲೈ ಮಾಡಬೇಕು ಅಂದ್ರೆ online form ತುಂಬ ಬೇಕಂತೆ !,ಬಾವಚಿತ್ರ ಸ್ಕ್ಯಾನ್ ಮಾಡಿ ಹಾಕಿಸಬೇಕಂತೆ....,
ಬೇಕಾದಷ್ಟು ಕಂಪ್ಯೂಟರ್ ಸ್ಕೂಲ್ಗಳು ಇವೆ ಹಳ್ಳಿಗಳಲ್ಲಿ . ಅಲ್ಲಿ ಹೋಗಿ ಕಲಿತು ಬನ್ನಿ ಅಂತಾರೆ... ತೋಟ ಗದ್ದೆಗಳಲ್ಲಿ ಗಿಡ ಮರ ಬೆಳೆಯುತ್ತದೆ ,ದುಡ್ಡು ಬೆಳೆಯುವುದಿಲ್ಲ ಎಂಬ ಸಾಮನ್ಯ ಜ್ಞಾನ ಸಹ ಇವರಿಗಿಲ್ಲವೇ?,
ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಕಲಿಯಲು ಸಾವಿರ ರೂಪಾಯಿ ಲಂಚ ಕೊಡುವ ಪ್ಲಾನ್ ಇದೆ...ಆದರೆ ಬಡ ನಿರುದ್ಯೋಗಿ ಯುವಕ/ಯುವತಿಯರು ಮಾತ್ರ ಸ್ವಂತ ಖರ್ಚಲ್ಲಿ ಕಲಿಯಬೇಕು.... ಆಮೇಲೆ ೩೦೦...೫೦೦ಹೀಗೆ ನೂರಾರು ರೂಪಾಯೀ ಅಪ್ಲಿಕೇಶನ್ ಫೀಸ್ ಕಟ್ಟಬೇಕು....,ದಿಲ್ಲಿಯ ದೊಡ್ಡ ಪರೀಕ್ಷೆ ಬರೆಯಲು ಪೋಸ್ಟ್ ಆಫೀಸ್ ನಲ್ಲಿ ೬೦ ರೂಪಾಯೀ ಕಟ್ಟಿದರೆ ಸಾಕು....ದರೋಡೆಗೂ ಮಿತಿ ಇರಬೇಕು ಸ್ವಾಮಿ ಅಥವಾ atleast ನಾಚಿಕೆಯಾದರು ಇರಬೇಕು...ಬರಿಈ ಬೋರ್ಡ್ ಹಾಕಿಕೊಂಡು ,ಗೂಟದ ಕಾರಿನಲ್ಲಿ ಸುತ್ತಿದರೆ ಸಾಲದು ಸ್ವಲ್ಪ ಆಚೆ ಈಚೆ ನೋಡಬೇಕು...
ತಮಗೆ ಮಾತ್ರ Toyato ಕಾರೆ ಬೇಕು..ಮನೆಯ ಬಾಡಿಗೆ ,ಫೋನ್ ಬಿಲ್ಲು ಸರ್ಕಾರ ಕೊಡಬೇಕು.....ಆ ಮಿತಿಯನ್ನು ಇನ್ನೂ ಹೆಚ್ಚಿಸಿ ಎಂದು ನಾಚಿಕೆ ಬಿಟ್ಟು ಸರ್ಕಾರಕ್ಕೆ ಲೆಟರ್ ಬರೆಯುತ್ತಾರಂತೆ...
ಒಬ್ಬ ಹಳ್ಳಿಯಿಂದ ಸಿಟಿಗೆ ಬಂದು ಅಪ್ಲಿಕೇಶನ್ ತುಂಬಲು ಇಂಟರ್ನೆಟ್ ಕೆಫೆ ಗೋ ಅಥವಾ ಪರಿಚಯದವರ ಮನೆಗೆ ಹೋಗಬೇಕು ಮತ್ತೆ ಫಿ ಕಟ್ಟಲು ಕೆಲವು ಬ್ಯಾಂಕ್ ಬ್ರಾಂಚ್ ಹುಡುಕಿಕೊಂಡು ಹೋಗಬೇಕು... ಮತ್ತೆ ಸ್ಕ್ಯಾನ್ ಮಾಡುವಾಗ ಇದೆ ಸೈಜ್ ಫೋಟೋ ಇರಬೇಕು ಎಂದು ಕೆಫೆ ಯವರ ತಲೆ ತಿನ್ನಬೇಕು ....
ಓಹೋ ಈಗ ಎಲ್ಲರ ಮನೆಯಲ್ಲೂ ಕಂಪ್ಯೂಟರ್ ಇದೆ...ಅದೇನು ಮಹಾ...ಎನ್ನುಥಾನಂತೆ ಒಬ್ಬ ಪ್ರ ಕಾ .,
ಆದರೆ ಅವನ ಮನೆಯ ಕಂಪ್ಯೂಟರ್ ಅನ್ನು ಮುತ್ತಿ ನೋಡಿಕೊಳ್ಳಲಿ,ಅದು ಸಹ ಅವನು ಸ್ವಂತ ದುಡ್ಡಿಂದ ತಂದಿರುವುದಲ್ಲ...ಸರ್ಕಾರದಿಂದ ಪುಕ್ಸಟ್ಟೆ ಸಿಕ್ಕಿದ್ದು !!!!
No comments:
Post a Comment