Wednesday, July 15, 2009

ಎಲ್ಲಕಡೆ ಸೋಲಾರ್ ಬಳಕೆ ಕಡ್ಡಾಯ?

ರಾಜ್ಯದ ಜನರೆಲ್ಲರು ಅಯೋಗ್ಯರು . ಆವರಿಗೆ ವಿಧ್ಯುತ್ತಿನ ಸದ್ಬಳಕೆ ಗೊತ್ತಿಲ್ಲ . ಅವರಿಗೆ ಬುದ್ದಿಕಲಿಸಲು ಎಲ್ಲಕಡೆ ಸೋಲಾರ್ ಬಳಕೆಯನ್ನು ಕಡ್ಡಾಯಮಾಡಿ ಕಾನೂನು ಮಾಡಲಾಗುತ್ತದೆ ಎಂದು ಅಗಾಗ ಸರ್ಕಾರ ಹೇಳುತ್ತಲೇ ಇರುತ್ತದೆ.
ವಿಧಾನಸೌಧದ ನಡುವೆ canteen ಗೆ ಹೋಗುವದಾರಿಯಲ್ಲಿ ಮಹಿಳೆಯರ ಶವಚಾಲಯ (urinals)
ಇದೆ. ಇದರ exaust fan ಇರುವ ದಿಕ್ಕಿನಲ್ಲಿ ಒಂದು skywater ಎಂಬ ಹೆಸರಿನ ಯಂತ್ರ ಇಟ್ಟಿದ್ದಾರೆ. ಅದು ವಾತಾವರಣದಿಂದ ನೀರು ಉತ್ಪತ್ತಿ ಮಾಡುತ್ತೆ ಅಂಥ board ಇದೆ . ಇದು ಚಲಿಸಲು ಕರೆಂಟು ಬೇಕು . ಮಳಇರಲಿ, ಚಳಿಇರಲಿ ಇದುಮಾತ್ರ ಒಂದೇಸಮನೆ on ಇರುತದೆ . ಇದರ ನೀರು tank ತುಂಬಿದ ಮೇಲೆ ನೆಲಕ್ಕೆ ಹರಿದು ಹೋಗುತ್ತಿರುತ್ತದೆ .

ಇದನ್ನು ಕುಡಿದರೆ ವಿಶೇಷ ಶಕ್ತಿ ಲಬ್ಯವಾಗುತ್ತೆ ಎಂಬ ಗುಸುಗುಸು ಇದೆ .
ಒಟ್ಟಾರೆ ವಿಧ್ಯತ್ತಿನ ಸದ್ಬಳಕೆ ಕಲಿಯಬೇಕಾಗಿರುವವರು ಯಾರು ಎಂಬುದು ಈಗ ನಮ್ಮನ್ನು ಕಾಡುವ ಪ್ರಶ್ನೆ.

No comments:

Post a Comment