ಎಲ್ಲಾ ನೌಕರರಿಗೂ ಉಪಯೋಗವಾಗುವ ಯಾವುದೇ ಕೆಲಸವನ್ನು ಮಾಡದೇ ತಮ್ಮ ವ್ಯವಹಾರಗಳಿಗೆ ಅನುಕೂಲವಾಗುವಂತಹ ತಿದ್ದುಪಡಿಗಳನ್ನು ಮಾತ್ರ ಅತ್ಯಂತ ಜರೂರಾಗಿ ಒತ್ತಡ ಹೇರಿ ಮಾಡಿಸಿಕೊಳ್ಳುತ್ತಾರೆ .ಸಂಘದ ಅಧ್ಯಕ್ಷ 28-9-2015 ರಂದು ಪತ್ರ ಬರೆಯುತ್ತಾರೆ . ಸರ್ಕಾರ ದಿ: 1-10-2015 ರಂದು ಆದೇಶ ಹೊರಡಿಸಿಬಿಡುತ್ತದೆ .................................................................................................................
Tuesday, October 27, 2015
Sunday, October 18, 2015
ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘ ಅಸ್ತಿತ್ವಕ್ಕೆ
ದಿನಾಂಕ ೧೫-೧೦-೨೦೧೫ ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ "ಹೊಸ ಪಿಂಚಣಿ ಯೋಜನೆ " (NPS) ನೌಕರರ ಸಂಘಟನಾ ಸಭೆ ನಡೆಯಿತು.ರಾಜ್ಯದ ಎಲ್ಲಾ ಜಿಲ್ಲೆಯ ಯುವ ಸರ್ಕಾರಿ ನೌಕರರರ ಪ್ರತಿನಿಧಿಗಳು ಇದರಲ್ಲಿ ಬಾಗವಹಿಸಿದ್ದರೆಂದು ವರದಿಯಾಗಿದೆ. ಈ ಸಭೆಯಲ್ಲಿ ಹೊಸ ಪಿಂಚಣಿ ಯೋಜನೆ " (NPS) ಸಾಧಕ ಬಾಧಕ ಗಳನ್ನುಆಮೂಲಾಗ್ರವಾಗಿ ಚರ್ಚಿಸಿ ಈ ಯೋಜನೆಯಡಿ ನೌಕರನ ಜೀವನಕ್ಕೆ ಯಾವುದೇ ಭದ್ರತೆ ಇಲ್ಲ.ಸರ್ಕಾರವು ನೌಕರನ ಹಣವನ್ನು ಕೆಲವು ಫಂಡ್ ಮ್ಯಾನೇಜರ್ ಗಳ ಮೂಲಕ ಷೇರುಪೇಟೆಯಲ್ಲಿ ತೊಡಗಿಸುವ ತಂತ್ರ ರೂಪಿಸಿದ್ದು ,ಈ ಯೋಜನೆಯಲ್ಲಿ ತಮ್ಮ ಹಣಕ್ಕೆ ಯಾವುದೇ ಭದ್ರತೆ ನೀಡಲು ಹಿಂದೇಟು ಹಾಕುತ್ತಿದೆ .ನಿವೃತ್ತಿಯ ನಂತರ ತಮಗೆ ಬರುವ ಮೊತ್ತವೆಷ್ಟು ಎಂಬುದೇ ಯಕ್ಷ ಪ್ರಶ್ನೆಯಾಗಿರುವುದರಿಂದ ಇಂತಹಾ ಯೋಜನೆಯನ್ನು ಕೈಬಿಟ್ಟು ,ಈಗ ಜಾರಿಯಲ್ಲಿರುವ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರಿಸುವಂತೆ ಸರ್ಕಾರವನ್ನು ಆಗ್ರಹಿಸಲು ಪ್ರತಿನಿಧಿಗಳು ನಿರ್ಧರಿಸಿದ್ದಾರೆ .ಹಿನ್ನೆಲೆಯಲ್ಲಿ ಈ ಯೋಜನೆಯಿಂದ ಒದಗಬಹುದಾದ ದುರಂತಗಳ ಬಗ್ಗೆ ನೌಕರರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ನಡೆಸಲು ಮತ್ತು ನಿವೃತ್ತಿ ವೇತನದ ಹಕ್ಕಿಗಾಗಿ ಹೋರಾಡಲು "ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘ "ವನ್ನು ಅಸ್ತಿತ್ವಕ್ಕೆ ತರಲು ನಿರ್ಧರಿಸಿದ್ದಾರೆ.
ಆದರೆ ಷೇರುಪೇಟೆ ದಲ್ಲಾಳಿಗಳೇ ಇಂದು ಸರ್ಕಾರದ ಆರ್ಥಿಕ ನೀತಿಯನ್ನು ರೂಪಿಸುವಷ್ಟು ಪ್ರಬಲಾಗಿದ್ದು ಎನ್ ಪಿ ಎಸ್ ನಿಂದ ಶೇರು ಪೇಟೆಗೆ ಹೋಗುತ್ತಿರುವ ಲಕ್ಷ ಕೋಟಿಗಳಷ್ಟು ಹಣವನ್ನು ಅವರು ಬಿಟ್ಟು ಕೊಡಲು ತಯಾರಿದ್ದಾರೆಯೇ, ಎಂಬುದನ್ನು ಕಾದು ನೋಡಬೇಕಾಗಿದೆ.
ಈಗ ಅಸ್ತಿತ್ವಕ್ಕೆ ಬಂದಿರುವ ಸಂಘವು ಎಲ್ಲಾ ಎನ್ ಪಿ ಎಸ್ ಸದಸ್ಯರನ್ನು ಪ್ರತಿನಿಧಿಸುತ್ತದೆಯೇ ಅಥವಾ ಈಗಿರುವ ಸರ್ಕಾರಿ ನೌಕರರ ಸಂಘದಂತೆ ಸ್ವಜಾತಿ ಬಾಂಧವರ ನಾಮನಿರ್ದೇಶನಕ್ಕೆ ಮೀಸಲಾಗುತ್ತದೆಯೇ ..ಕಾದು ನೋಡಬೇಕು
The Karnataka state Government NPS Employees Assosiation formed and decide to demand fair Pension insted of NPS
Subscribe to:
Posts (Atom)