Monday, July 9, 2012

ಮುಳುಗುವ ಹಡಗಿಂದ .....

ಮುಳುಗುವ ಹಡಗಿಂದ ಇಲಿಗಳು ತಕಪಕನೆ ನೀರಿಗೆ ಹಾರಿ ಪಾರಾಗುವಂತೆ ಸದಾನಂದಗೌಡರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆಲವು ಅಧಿಕಾರಿಗಳು ಸೋಮವಾರ ರಾತ್ರೋರಾತ್ರಿ ಬೇಕುಬೇಕಾದ ಕಡೆ ವರ್ಗ ಮಾಡಿಸಿಕೊಂಡಿದ್ದಾರೆ.
ಇದರಲ್ಲಿ ಪ್ರಮುಖವಾದ ಹೆಸರುಗಳೆಂದರೆ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ವಿ ಯಶವಂತ್ .ಇವರು ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಗೆ ವ್ಯವಸ್ತಾಪಕ ನಿರ್ದೇಶಕರಾಗಿ ವರ್ಗ ಮಾಡಿಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ವಿಶೇಷ ಕಾರ್ಯದರ್ಶಿಗಳಾಗಿದ್ದ  ಡಾ ಕೆ ಅಪ್ಪಯ್ಯರವರನ್ನು  ಈ ಕೂಡಲೇ ಜಾರಿಗೆ ಬರುವಂತೆ ಅಪರ ಆಯುಕ್ತರು ,ಪ್ರಾದೇಶಿಕ ಆಯುಕ್ತರ ಕಚೇರಿ ಬೆಂಗಳೂರು ಇಲ್ಲಿಗೆ  ವರ್ಗಾಯಿಸಲಾಗಿದೆ , ಸಿ ಎಂ ರ ಉಪಕಾರ್ಯದರ್ಶಿಯಾಗಿರುವ ಎಂ ಕೆ ಕೆಂಪೇಗೌಡ ರವರನ್ನು  ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಬೆಂಗಳೂರು, ಇಲ್ಲಿನ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ದಿ :31-7-12 ಕ್ಕೆ ನಿವೃತ್ತರಾಗಲಿದ್ದ  ಶ್ರೀ ಮೊಹಮ್ಮದ್ ಮೆಹಮೂದ್ ಕೆ ಎ ಎಸ್ ಇವರ ಸೇವೆಯನ್ನು ಗುತ್ತಿಗೆ ಆಧಾರದ ಮೇಲೆ ಮುಖ್ಯಮಂತ್ರಿಯವರ ಕಚೇರಿಯಲ್ಲಿ ಮುಂದಿನ ಎರಡು ವರ್ಷ ಅವಧಿಗೆ ವಿಸ್ತರಿಸಲಾಗಿದೆ.

ಈ ಉರಿಯುವ ಮನೆಯ ಗಳ ಹಿರಿಯುವ " ಕಾಯಕದಲ್ಲಿ ಸಚಿವರುಗಳು ಕೂಡಾ ಮಗ್ನರಾಗಿದ್ದಾರೆ.
ಸಚಿವ ಬಾಲಚಂದ್ರ ಜಾರಕಿಹೊಳಿ ಇವರು ನ0 2,ರೇಸ್ ಕೋರ್ಸ್ ರಸ್ತೆ ನಿವಾಸ ಅಲಾಟ್ ಮಾಡಿಸಿಕೊಂಡರೆ ,ವರ್ತೂರ್ ಪ್ರಕಾಶ್ ಅದೇ ರಸ್ತೆಯ ಮನೆ ನಂ 4 ನ್ನು ತೆಗೆದುಕೊಂಡಿದ್ದಾರೆ. ಮೆಗಾಸಿಟಿ ದಗಾಕೋರ ಯೋಗೇಶ್ವರ್ ರವರಿಗೆ  ಸಪ್ತ ಸಚಿವರ ವಸತಿಗೃಹ (ನಂ  3) ಯನ್ನು ನೀಡಲಾಗಿದೆ.

No comments:

Post a Comment