Tuesday, October 5, 2010

ಸಚಿವಾಲಯದ ಮೈಗಳ್ಳರ ಬೆನ್ನು ಹತ್ತಿ......

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯಧರ್ಶಿಗೆ ಈಗಲಾದರೂ ಅವರ ಇಲಾಖೆಯ ವಸ್ತುಸ್ತಿತಿ ಅರ್ಥವಾಗಿರುವುದು ಶ್ಲಾಘನೀಯ. ಇದರ ಪಲಶ್ರುತಿಯಾಗಿ ದಿ: ೨೬:೦೮:೨೦೧೦ ರ ಸುತ್ತೋಲೆ ಸಂಖೆ: ಸಿಆಸುಇ ೧೫೬ ಕಾ ೨೦೧೦ ಹೊರಡಿಸಲಾಗಿದೆ.

ಸಿಆಸುಇ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲೇ ಸಿಆಸುಇ ಸೋಮಾರಿತನಕ್ಕೆ ಹೆಸರುವಾಸಿಯಾದ ಇಲಾಖೆ.ಇದು ಓಪನ್ ಆಗುವುದು ಹನ್ನೊಂದು ಗಂಟೆಗೆ. ಕ್ಲೋಸ್ ಆಗುವುದು ಐದು ಗಂಟೆಗೆ. (ಸರ್ಕಾರದ ಸಮಯ ಬೆಳಗ್ಗೆ 10 ರಿಂದ 5:30 ). ಇಲ್ಲಿನ ಶಾಖಾದಿಕಾರಿಗಳು ಇನ್ನು ಹದೆಗೆಟ್ಟು ಹೋಗಿದ್ದಾರೆ. ಯಾವತ್ತಾದರೂ ಸಭೆ ಸಮಾರಂಭ ಇದ್ದಾಗ ರಾತ್ರಿ ತಡವಾಗಿ ಮನೆಗೆ ಹೋಗಬೇಕಾದ ಪರಿಸ್ತಿತಿ ಬಂದಾಗ ಮರುದಿನ ಕಚೇರಿಗೆ ಸ್ವಲ್ಪ ತಡವಾಗಿ ಬರಬಹುದಾದ ಸೌಲಭ್ಯ ಮಾಡಿಕೊಡಲು "Flexi Time" ಎಂಬ ವ್ಯವಸ್ತೆ ಮಾಡಲಾಗಿದೆ. ಆದರೆ ಈ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಂಡಿರುವ ಸಚಿವಾಲಯದ ಅಧಿಕಾರಿವರ್ಗ ತಡವಾಗಿ ಬರುವುದನ್ನೇ ನಿತ್ಯಕರ್ಮವನ್ನಾಗಿ ಮಾಡಿಕೊಂಡು ಬಿಟ್ಟಿದೆ.ಹನ್ನೊಂದು ವರೆಗೆ ಕಚೇರಿಗೆ ಬಂದು ಹರಟೆ ಹೊಡೆಯುತ್ತಾ ಕಾಲಕಳೆಯುವುದು,ಆ ನಂತರ ವಿಧಾನ ಸೌಧದ ಮುಂದಿರುವ KGS ಕ್ಲಬ್ನಲ್ಲಿ ಕಾಲಹರಣ ಮನೆಗೆ ಮಾಡಿ ಮನೆಗೆ  ಹೋಗುವಾಗ biometrix ವ್ಯವಸ್ತೆಯಲ್ಲಿ ನಿರ್ಗಮನದ ಸಮಯ ದಾಖಲಿಸಿದರೆ ಅಂದಿನ ಕೆಲಸ ಮುಗಿಯಿತು.ಸಿ ಆ ಸು ಇಲಾಖೆಯ  ಕಾರ್ಯದರ್ಶಿ ಕೆ.ಆರ್.ಶ್ರೀನಿವಾಸ ಸುಮ್ಮನೆ ಸಿಬ್ಬಂದಿಗಳ  ಮೇಲೆ ಏಗರಾಡುವುದನ್ನು ಬಿಟ್ಟು ಈ "Flexitime" ವ್ಯವಸ್ಥೆಯನ್ನು ರದ್ದು ಪಡಿಸಲು ಕ್ರಮ ಕೈಗೊಳ್ಳಬೇಕು. ಇಲ್ಲಿನ ಕೆಲವು ಶಾಖಾಧಿಕಾರಿಗಳು ೧೨ ಗಂಟೆಗೆ ಕಚೇರಿಗೆ ಬಂದರೆ ಉಳಿದವರು ಐದು ಗಂಟೆಗೆಲ್ಲಾ ಜಾಗ ಖಾಲಿ ಮಾಡುತ್ತಾರೆ. ಇದೆಲ್ಲವನ್ನು ನೋಡಿಕೊಂಡು ಕೂರುವ ಅಪರ/ಜಂಟಿ/ಉಪ ಕಾರ್ಯಧರ್ಶಿಗಳಿಗೆ ತಮ್ಮ ನೌಕರರನ್ನು ಹದ್ದುಬಸ್ತಿನಲ್ಲಿಡುವ ಶಕ್ತಿ ಇಲ್ಲ.

 ಇಲ್ಲಿ ಶಾಖೆಗಳಿಗೆ,ಟೇಬಲ್ ಗಳಿಗೆ ಕೆಲಸ ಕಾರ್ಯಗಳನ್ನು ಸಮಾನವಾಗಿ ಹಂಚಿಕೆ ಮಾಡಿಲ್ಲ.ಮಾಡುವ ಕೆಪಾಸಿಟಿ ಮೂರ್ಖ ಐ.ಎ.ಎಸ್ ಅಧಿಕಾರಿಗಳಿಗೆ ಅಥವಾ ಸಚಿವಾಲಯದ ಪ್ರಮೋಟಿ ಅಪರ/ಜಂಟಿ/ಉಪ ಕಾರ್ಯಧರ್ಶಿಗಳಿಗೂ ಇಲ್ಲ. ಇಲ್ಲಿ typist ಗಳು ಹೆಚ್ಚುವರಿ ಕಾರ್ಯದರ್ಶಿಗಳ ಲೆವೆಲ್ ಗೆ ಬಡ್ತಿ ಪಡೆಯುತ್ತಾರೆ ಎಂದರೆ ಇವರುಗಳ ಕ್ವಾಲಿಟಿ ಎಷ್ಟಿರುತ್ತದೆ ಎಂಬುದನ್ನು ನೀವೇ ಊಹಿಸಬಹುದು.ಇಲ್ಲಿ ಕೆಲವರು ಬೆಳಗ್ಗೆ ಇಂದ ಸಂಜೆ ಏಳು ಗಂಟೆಯವರೆಗೆ ಇರುವವರೂ ಇದ್ದಾರೆ.ಐದೂ ಕಾಲಿಗೆ ಎದ್ದೊಡುವ "ಪುಣ್ಯಾತ್ಮೆ"ಯರೂ ಇದ್ದಾರೆ. ಐದು ವರೆಗೆ ಸರಿಯಾಗಿ ವಿಧಾನ ಸೌದದ ಆವರಣ ಬಿಟ್ಟು ಹೊರಡುವ ಸರ್ಕಾರಿ ಬಸ್ಸುಗಳನ್ನು ನಿಯಂತ್ರಿಸಿ ಐದು ಮುಕ್ಕಾಲಿಗೆ ಹೊರಡುವಂತೆ ಮಾಡುವ ಕೆಪಾಸಿಟಿ ಸಾರಿಗೆ ಇಲಾಖೆಯ ಕಾರ್ಯದರ್ಶಿಗೆ ಇಲ್ಲ. ವಿಪರ್ಯಾಸ ನೋಡಿ, ಈಗ ಬಿ.ಎಂ.ಟಿ.ಸಿ ಯ M.D. ಯಾಗಿರುವ ಸಯ್ಯದ್ ಜಮೀರ್ ಪಾಷಾ ಸಹ ಹಿಂದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಯಾಗಿದ್ದವರೇ . ಆದರು ಸಹ P.H.S.ಗಳನ್ನು ನಿಯಂತ್ರಿಸಲು ಇವರಿಗೆ ಸಾಧ್ಯವಾಗಿಲ್ಲ.ಸಾರಿಗೆ ಕಾರ್ಯದರ್ಶಿಗಳು ದಿ: 22-09-2009 ರಂದು ಬರೆದ ಅರೆ ಸರ್ಕಾರೀ ಪತ್ರ ಸಂಖ್ಯೆ . Sa Ri E 127 RIC 2008 ಯನ್ನು ಆತ ಕಸದ ಬುಟ್ಟಿಗೆ ಎಸೆದಿರುವಂತಿದೆ.ಸರ್ಕಾರಿ ನೌಕರರಲ್ಲಿ ಸಮಯ ಪ್ರಜ್ಞೆ ಮೂಡಿಸಲು ಯಾವ ಐ.ಎ.ಎಸ್. ಅಧಿಕಾರಿಯೂ ತಯಾರಿಲ್ಲ. ಯಾವ್ಯಾವ ಕಡೆ ಕಮಿಷನ್ ಸಿಗುತ್ತೆ,ಎಲ್ಲೆಲ್ಲಿ ಫೆಲೋಶಿಪ್ ಸಿಗುತ್ತೆ,ಎಲ್ಲೆಲ್ಲಿ ವಿದೇಶಿ ಯಾತ್ರೆಯ ಅವಕಾಶ ಸಿಗುತ್ತದೆ,ಯಾವ್ಯಾವ ವಿದೇಶಿ ಯುನಿವೆರ್ಸಿಟಿಯಲ್ಲಿ ಗೆಸ್ಟ್ ಪ್ರೊಫೆಸರ್ ಆಗಿ ಹೋಗಲು ಅವಕಾಶ ಇದೆ ,ಯಾವ ಯಾವ ಪತ್ರಿಕೆಗಳಿಗೆ ಕಾಲಂ ಗಳನ್ನ ಬರೀಬಹುದು ಎಂಬುದನ್ನು ಹುಡುಕಲು ಅವರಿಗೆ ಟೈಮಿಲ್ಲ ಪಾಪ.. ಇಲ್ಲಿ ಹಾಜರಾತಿ ಚೆಕ್ ಮಾಡಲು ಟೈಮ್ ಎಲ್ಲಿರುತ್ತದೆ?  ಕೆ.ಆರ್.ಶ್ರೀನಿವಾಸ ಏನಾದರೂ ಬದಲಾವಣೆ ತರುತ್ತಾರೋ ಆಥವಾ ಇಲ್ಲಿನ "ಫ್ಲೆಕ್ಷಿ ಟೈಮ್ " ಲಾಬಿಗೆ ಮಣಿದು ತೆಪ್ಪಗಾಗುತ್ತಾರೋ ಕಾದು ನೋಡಬೇಕು.ಮೊದಲು ಆರು ತಿಂಗಳ ಹಾಜರಾತಿ ತನ್ನಿ ಪರಿಶೀಲಿಸುತ್ತೇನೆ ಎಂದವರು ಈಗ 3 ತಿಂಗಳ ಹಾಜರಾತಿ ಪರಿಶೀಲಿಸಿ ಶಾಸ್ತ್ರ ಮುಗಿಸುತ್ತೇನೆ ಎನ್ನುತಿದ್ದಾರೆ. ಒಟ್ಟಾರೆ ಸಚಿವಾಲಯದ ಮೈಗಳ್ಳರು ಮತ್ತೊಂದು ವಿಜಯ ಸಾದಿಸಿದಂತಾಗಿದೆ. ಈ ಆಯೋಗ್ಯರೊಂದಿಗೆ ಏಗೀ ಏಗೀ ರೋಸಿಹೋದ ಮುಖ್ಯಕಾರ್ಯದರ್ಶಿಗಳು ಎ೦ ಜೆ ಖಾನ್ ಎಂಬುವ ಮೆಧಾವಿಯನ್ನು ನೇಮಿಸಿಕೊಂಡು ಆತನ ಸಹಾಯದಿಂದ ಹಾಗೋ ಹೀಗೋ ಕೆಲಸ ನಿರ್ವಹಿಸಿಕೊಂಡು ಹೋಗುತಿದ್ದಾರೆ.
ಹೊರಗುತ್ತಿಗೆ /ನಿಯೋಜನೆ/ಮರುನೇಮಖಾತಿಗಳ ಆಧಾರದ ಮೇಲೆ ಬಂದು ಕೆಲಸ ಮಾಡುತ್ತಿರುವವರಿಗೆ ಹೊರಜಗತ್ತಿನ ಅರಿವು ,ಆಡಳಿತ ಚಾಕಚಾಖ್ಯತೆ ಇರುವುದರಿಂದ ಸರ್ಕಾರದ ಕೆಲಸ ಹೇಗೋ ನಡೆಯುತ್ತಿದೆ ಎನ್ನುತ್ತಿದ್ದಾರೆ ಸಾರ್ವಜನಿಕರು. ಏನೇ ಇರಲಿ ಇನ್ನು ಮುಂಬರುವ ದಿನಗಳಲ್ಲದರೂ ಸಚಿವಾಲಯದ ನೌಕರರು ಹೊರಗುತ್ತಿಗೆ/ OOD ನೌಕರರ ಸಹಾಯ ಇಲ್ಲದೆ ಕೆಲಸ ನಿರ್ವಹಿಸುವಷ್ಟು ಸಬಲರಾಗಲಿ ಎಂದು ಹಾರೈಸೋಣ .

No comments:

Post a Comment