Monday, May 7, 2012

DPAR 59 SCR 94,Dated:3-11-95 (Karnataka Government Secretariat Services (Deputation of Section Officers and Assitants for Field Training) Rules,1995



ಯಾರೋ ಕೇಳಿದರು ಈ  ಕೆಳಕಂಡಂತೆ
'Sir pls Provide the Karnataka Govt Secretariat Service Rules.

I need it, it is not availabe in Bengaluru book stores.

Pls Provide Karnataka Govt Secretariat Service Rules.'

ನನಗೆ ನಗೆ ಬಂತು. ಸಚಿವಾಲಯದಲ್ಲಿ ರೂಲ್ಸು ,ಗೀಲ್ಸು ಏನೂ ಇಲ್ಲ . ಅದನ್ನು ಅವರಿಗೆ ಅರ್ಥವಾಗುವಂತೆ ಹೇಳೂದು ಹೇಗೆ . ಒಂದು ನಾಗರೀಕ  ಸಮಾಜದ ಆಡಳಿತದ  ಕೇಂದ್ರ  ಸ್ಥಾನದಲ್ಲೇ ಇಂತಹಾ ಅವ್ಯವಸ್ಥೆ ಇದೆ ಎಂದರೆ ಯಾರಾದರೂ ನಂಬಲು ಸಾಧ್ಯವೇ ? ಇದನ್ನು ವಿವರಿಸಬೇಕೆಂದರೆ ಒಂದು ಉದಾಹರಣೆ ಬೇಕು . ನನ್ನಲ್ಲಿದ್ದ  ಕೆಲವು ನಿಯಮಗಳ  ಪ್ರತಿಯಲ್ಲಿ ಕೈ ಆಡಿಸಿದಾಗ  ಈ  ಕೆಳಗಿರುವ  ನಿಯಮ  (DPAR 59 SCR 94,Dated:3-11-95 (Karnataka Government Secretariat Services (Deputation of Section Officers and Assitants for Field Training) Rules,1995) ಸಿಕ್ಕಿತು.
ಇದು ಸಚಿವಾಲಯದ  ಒಂದು ನಿಯಮ.ಆದರೆ ಇದನ್ನು ಯಾರೂ ಪಾಲಿಸುತ್ತಿಲ್ಲ. ಸುಮ್ಮನೆ ಕಾಟಾಚಾರಕ್ಕೆ ಈ ನಿಯಮವನ್ನು             ರೂಪಿಸಲಾಗಿದೆ. ಬಡ್ತಿಗೆ  ಅರ್ಹರಾಗಲು ಎಲ್ಲಾ ಅಧಿಕಾರಿಗಳು  ಒಂದು ವರ್ಷದ ಕ್ಷೇತ್ರ  ತರಬೇತಿ ಮುಗಿಸಬೇಕು ಎನ್ನುತ್ತದೆ ಈ ನಿಯಮ .ಆದರೆ ಶಾಖಾಧಿಕಾರಿಗಳಿಗೆ ಆಧೀನ ಕಾರ್ಯದರ್ಶಿಯಾಗಿ ಬಡ್ತಿ ನೀಡುವಾಗಲೂ ಈ ನಿಯಮವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಅದು ತಪ್ಪು ಎಂದು ನಾನು ಹೇಳುತ್ತಿಲ್ಲ.ಇಲ್ಲಿನವರ  ಮೂರ್ಖತನಕ್ಕೊಂದು ಉದಾಹರಣೆ  ಕೊಡುತ್ತಾ ಇದ್ದೇನೆ ಅಷ್ಟೇ .ಇಲ್ಲಿ ಯಾವ  K C S R, C& R Rules etc ಗಳಿಗೆ ಬೆಲೆಇಲ್ಲ . ಏನಿದ್ದರೂ  Rule of the Jungle. ಬಲಿಷ್ಠ  ಅಧಿಕಾರಿಗಳ  ಕೈ  ಕೆಳಗೆ ಕೆಲಸ  ಮಾಡುವವರು ನಿಯಮಗಳನ್ನು  ಬೇಕಾದ  ಹಾಗೆ ತಿದ್ದಿಕೊಳ್ಳುತ್ತಾರೆ . ಉದಾಹರಣೆಗೆ  ಈ  ಕೆಳಕಂಡ  ನಿಯಮವನ್ನೇ  ನೋಡಿ . ಸಹಾಯಕರಿಗೆ ಬಡ್ತಿ ನೀಡುವಾಗ ಒಂದು  ವರ್ಷದ  ಕ್ಷೇತ್ರ  ತರಬೇತಿ ಮುಗಿಸಬೇಕು ಎನ್ನುತ್ತಾರೆ ಆದರೆ ಇವರೊಂದಿಗೆ  ಹಿರಿಯ  ಸಹಾಯಕ  ಹುದ್ದೆಗೆ  ಬಡ್ತಿ ಪಡೆಯುವ   Steno ಗಳಿಗೆ ಈ  ಪ್ರತಿಬಂಧ ಇಲ್ಲ. ಏಕೆಂದರೆ ಅವರು ದೊಡ್ಡ  ದೊಡ್ಡ ಅಧಿಕಾರಿಗಳಿಗೆ  ಅತೀ ಹತ್ತಿರ !.
ಇನ್ನು  "ಸಮಾನ  ವೇತನ" ಎಂಬ  ಪರಿಕಲ್ಪನೆ ಇಲ್ಲಿ ಇಲ್ಲ . ನಾನು  ಮಂತ್ರಿಗಳ  ಬಳಿ ಕೆಲಸ  ಮಾಡುತ್ತೇನೆ  ಹೆಚ್ಚು ವೇತನ  ಕೊಡಿ ...ನಾನು ಕಮಿಟಿ ಹತ್ತಿರ  ಕೆಲಸ  ಮಾಡುತ್ತೇನೆ  ಹೆಚ್ಚಿನ  ವೇತನ  ಕೊಡಿ . ನಾನು  ಅಸೆಂಬ್ಲಿ  ಕೆಲಸ  ಮಾಡುತ್ತೇನೆ ಹೆಚ್ಚಿನ  ವೇತನ (Special Pay) ಕೊಡಿ  ಎಂದು  ಬಿಕ್ಷೆ ಬೇಡುವ  ಮ0ದಿಗೇ ಇಲ್ಲಿ ಬೆಲೆ.  ಕ್ಷೇತ್ರ  ಇಲಾಖೆಯಲ್ಲಿ ಹಗಲಿರುಳು ದುಡಿದರೂ ಅದೇ ವೇತನ  ಆದರೆ ಇಲ್ಲಿ ಫ್ಯಾನ್  ಕೆಳಗೆ ಕುಳಿತು ಕೆಲಸ  ಮಾಡೊರಿಗೆ special Pay!.  ಒತ್ತಡ  ತಡೆಯಲಾರದೆ  ಅಲ್ಲಿ ಪಂಚಾಯತ  ಅಧಿಕಾರಿಗಳು (PDO) ಆತ್ಮಹತ್ಯೆ ಮಾಡಿಕೊಂಡರೂ ಕ್ಯಾರೆ ಅನ್ನದ  ಸರ್ಕಾರ  ಇಲ್ಲಿ  ಒಂದೇ ಬಿಲ್ಡಿಂಗ್  ನಲ್ಲಿ ಇರುವ  ಒಂದೇ ವೃಂದದ  ಕೆಲಸಗಾರರಿಗೆ ತರಹಾವಾರಿ ಸಂಬಳ  ನೀಡುತ್ತಿದೆ. ಮನೆಗೆಲಸದವರಿಗೆ ,ಜಲ್ಲಿ ಮರಳು ಹೊರುವವರಿಗೆ ,ಗಾರೆ ಕೆಲಸದವರಿಗೆ ಬಟ್ಟೆ ಕೊಡುವುದನ್ನು ಕೇಳಿದ್ದೇವೆ . ಇಲ್ಲಿ ಒಂದು ಮಹಡಿಯಲ್ಲಿ  ನೌಕರರು ಬಟ್ಟೆಗೂ ಕೈಚಾಚುತ್ತಾರೆ !! ಈ  ಕರ್ನಾಟಕದಲ್ಲಿ ಚಪ್ಪಲಿ ಹೊಲೆಯುವವನು ಕೂಡ ಪತ್ರಿಕೆಗಳನ್ನು ಕೊಂಡು ಓದುತ್ತಾನೆ.ಆದರೆ ಅಧಿಕಾರಿಗಳಿಗೆ ಪೇಪರ್ ಓದಲು ಸರ್ಕಾರ ಕಾಸು ಕೊಡಬೇಕು!! ಸಚಿವಾಲಯದಲ್ಲಿ ಅಧಿಕಾರಿಗಳಿಗೆ ವಾರ್ತಾಪತ್ರಿಕೆಗಳನ್ನು ಕೊಳ್ಳಲು ಒಂದು ಬತ್ಯೆ ಸಿಗುತ್ತದೆ. ಇದು ಇಲ್ಲದಿದ್ದರೆ ಅವರು ಪತ್ರಿಕೆಯನ್ನೇ ಓದುವುದಿಲ್ಲವೇ? ? ಅಥವಾ ಆ allowence ಪಡೆಯದ ಕೆಳಹಂತದ ನೌಕರರು ಪತ್ರಿಕೆ ಕೊಂಡರೆ ಅದು ನಿಯಮಬಾಹಿರವಾಗುತ್ತದೆಯೇ?.

C & R Rules ಗೆ ಬೆಲೆ ಇಲ್ಲ. ಕೆಲವು ಕಡೆ sanctioned posts ಗಿಂತಾ ಹೆಚ್ಚಿನ  ಸಿಬ್ಬಂದಿ ಇದ್ದಾರೆ . ಎಲ್ಲರಿಗೋ ಕಣ್ಣು ಮುಚ್ಚಿ ಸಂಬಳ  ಕೊಡುತ್ತೆ  ಸರ್ಕಾರ ! What a Joke!,,  ...Secretariat Sucks