Sunday, September 4, 2011

Amendment to KAS Examination Syllabus

ಬಹಳ ವರುಷಗಳ ನಂತರ ಕೆ ಎ ಎಸ ಇತ್ಯಾದಿ gezetted ಹುದ್ದೆಗಳ ನೇಮಕಾತಿ ನಿಯಮಗಳನ್ನು ಬದಲಾಯಿಸಲು ಸರ್ಕಾರ ತೀರ್ಮಾನಿಸಿದೆ.ಇದಕ್ಕೆ ಈ ಹಿಂದೆ ಹಳೆಯ ನಿಯಮಗಳನ್ವಯ ಈಗಾಗಲೇ ಆಯ್ಕೆಯಾಗಿರುವ ಅಭ್ಯರ್ಥಿಗಳ  quality ಕಾರಣ ಇರಬಹುದು. Gezeted probationers ಪರೀಕ್ಷೆಯ ಸಿಲಬಸ್ ಬದಲಾಯಿಸುವ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗವೇ ಒಂದು ಆಳವಾದ ಅಧ್ಯಯನ ನಡೆಸಿ ಸಿಲಬಸ್ ಬದಲಿಸುವ ಬಗ್ಗೆ ಸರ್ಕಾರಕ್ಕೆ ಒಂದು ಪ್ರಸ್ತಾವನೆಯನ್ನು ಸಲ್ಲಿಸಿತ್ತಂತೆ. ಆದರೆ ಸರ್ಕಾರಕ್ಕೆ ಈ ಆಯೋಗದ ಸದಸ್ಯರ ಬುದ್ದಿಶಕ್ತಿಯ ಬಗ್ಗೆ ಅನುಮಾನವೋ, ಅಥವಾ ಅವರನ್ನೆಲ್ಲಾ ಮಹಾ ಮೂರ್ಖರೆಂದು ಪರಿಗಣಿಸಿತೋ ಎನೋ, ಆ ಪ್ರಸ್ತಾವನೆಯನ್ನು ಕಸದ ಬುಟ್ಟಿಗೆ ಎಸೆದು ಗುಮಾಸ್ತರ ಮೂಲಕ  ತಾನೇ ಒಂದು ಸಿಲಬಸ್ಸನ್ನು ಸಿದ್ದಪಡಿಸಿದೆ. 
Karnataka recruitment of Gazetted Probationers (Appointment by Compititive Examination) Rules 1997  ಗೆ ತಿದ್ದುಪಡಿ ಮಾಡಿ ದಿನಾಂಕ 29-8-2011  ರಂದು Draft Rules  ಹೊರಡಿಸಿದೆ. ಇದಕ್ಕೆ ಹದಿನೈದು ದಿನಗಳಲ್ಲಿ ಯಾವುದೇ ಪ್ರಮುಖ ಆಕ್ಷೇಪಣೆ ಬರದೆ ಇದ್ದಲ್ಲಿ ಇದೇ  ಕರಡು ಖಾಯಂ ಗೊಳ್ಳಲಿದೆ . 

The draft Notification No. DPAR 14 SRR 2011 Dated 29-08-2011 has been given hereunder


 





KAS New syllabus 2011, KAS Revised syllabus.......

Saturday, September 3, 2011

ನೌಕರರೆ , ಚಂದಾ ಎತ್ತಬೇಡಿ -ಹುಷಾರ್






  ಚಂದಾ ಎತ್ತಬೇಡಿ -ಹುಷಾರ್ ....

ಸರ್ಕಾರಿ ಸಮಾರಂಭಗಳಿಗೆ ಅಲಂಕಾರ ಮಾಡುವ ನೆಪದಲ್ಲಿ, ರಾಷ್ಟ್ರೀಯ ಹಬ್ಬಗಳಿಗೆ ವಾಹನಗಳಿಗೆ ಸಿಂಗಾರ ಮಾಡುವ ನೆಪದಲ್ಲಿ ,ಹಬ್ಬ ಹರಿದಿನಗಳ ಕಾರಣ ಮುಂದಿಟ್ಟುಕೊಂಡು ಸಾರ್ವಜನಿಕರಿಂದ ,ಸಹೋದ್ಯೋಗಿಗಳಿಂದ ಬಿಕ್ಷೆ ಬೇಡುವುದನ್ನು ಮೇಲ್ಕಂಡ ಸುತ್ತೋಲೆ ನಿಷೇಧಿಸುತ್ತದೆ.

ನಿಯೋಜನೆ ಅವಧಿ -ಖಡ್ಡಾಯವಾಗಿ ಐದು ವರ್ಷ ಮಾತ್ರ

ನಿಯೋಜನೆ ಅವಧಿ -ಖಡ್ಡಾಯವಾಗಿ ಐದು ವರ್ಷ ಮಾತ್ರ