Saturday, September 25, 2010

DPAR 37 SDE 2009 Dt:6-4-2010 Censure




DPAR 1 SSR 2010

DPAR 1 SSR 2010 Dt:13-4-2010 Dept exams



DPAR 46 SDE 2008 Dt:11-2-2010. Disciplinary Authority for Group B officers (CCA Rules)



















DPAR 46 SDE 2008 Dt:11-2-2010. Head od the departments as Disciplinary Authority for Group B officers under  CCA Rules)

DPAR 15 SDE 2006 Dt:27-4-2010 Revocation of suspension

KCS(CCA) Rules,1957, Karnataka

Thursday, September 9, 2010

ಕಡತ ನಾಪತ್ತೆ ಪ್ರಕರಣ: 6 ಜನರು ಅಮಾನತು

ಪ್ರಜಾವಾಣಿ ವಾರ್ತೆ,ಮಂಗಳವಾರ , ಸೆಪ್ಟೆಂಬರ್ 7, ೨೦೧೦

http://www.prajavani.net/Content/Sep72010/state20100906203090.asp



ಬೆಂಗಳೂರು: ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಆಪ್ತ
ಹಿರಿಯ ಸಹಾಯಕ ಜಗದೀಶ ರೆಡ್ಡಿ ಸೇರಿದಂತೆ ಆರು ಮಂದಿಯನ್ನು ರಾಜ್ಯ ಸರ್ಕಾರ ಅಮಾನತು ಮಾಡಿ ಆದೇಶ
ಹೊರಡಿಸಿದೆ.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಜಮೀನು ವಿವಾದ ಸುಪ್ರೀಂ ಕೋರ್ಟ್‌ನಲ್ಲಿದ್ದು, ಇದಕ್ಕೆ ಸಂಬಂಧಿಸಿದ ಎರಡು
ಕಡತಗಳು ನಗರಾಭಿವೃದ್ಧಿ ಸಚಿವಾಲಯದಲ್ಲಿ ಇಲ್ಲ. ಇದಕ್ಕೆ ಕಾರಣರಾದ ಎಲ್ಲರನ್ನೂ ಅಮಾನತು
ಮಾಡಲಾಗಿದೆ.

ಇಂಧನ ಇಲಾಖೆ ಅಧೀನ ಕಾರ್ಯದರ್ಶಿ ಎಸ್.ಜೆ.ಸಂಪತ್‌ಕುಮಾರ್ (ಇವರು ಈ ಹಿಂದೆ ನಗರಾಭಿವೃದ್ಧಿ ಇಲಾಖೆ
ಶಾಖಾಧಿಕಾರಿಯಾಗಿದ್ದರು), ಶಾಖಾಧಿಕಾರಿ ಶಾಂತರಾಮ್ ನಾಯಕ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ
ಹಿರಿಯ ಸಹಾಯಕ ಟಿ.ಹಾಲಸಿದ್ದಪ್ಪ (ಈ ಹಿಂದೆ ಸಹಾಯಕರು, ನಗರಾಭಿವೃದ್ಧಿ), ಸಹಾಯಕ ಎಲ್.ರಮೇಶ್, ಕಿರಿಯ
ಸಹಾಯಕ ಟಿ.ಎಚ್.ಚಿಕ್ಕಹುಚ್ಚಯ್ಯ ಅಮಾನತುಗೊಂಡ ಸಿಬ್ಬಂದಿ.

ಜಗದೀಶ ರೆಡ್ಡಿ ಕೂಡ ಈ ಹಿಂದೆ ನಗರಾಭಿವೃದ್ಧಿ ಇಲಾಖೆಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ನಂತರ ಅವರು
ಬಡ್ತಿ ಪಡೆದು, ಸಚಿವರ ಆಪ್ತ ಹಿರಿಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.


ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ಬಡಾವಣೆ ಸಲುವಾಗಿ 1998ರಲ್ಲಿ ಆರು ಎಕರೆ ಜಾಗ ಸ್ವಾಧೀನಪಡಿಸಿಕೊಂಡಿದ್ದು,
ಅದನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಿ ಎಂದು ಅದರ ಮಾಲೀಕರು ಸರ್ಕಾರವನ್ನು ಕೋರಿದ್ದರು. ಅಧಿಕಾರಿಗಳು ಇದು
ಸಾಧ್ಯ ಇಲ್ಲವೆಂದು ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ್ದರು. ಈ ನಡುವೆ ಆ ಸಂದರ್ಭದಲ್ಲಿ ನಗರಾಭಿವೃದ್ಧಿ
ಸಚಿವರಾಗಿದ್ದವರು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಕಡತದಲ್ಲಿಯೂ ಬರೆದಿದ್ದರು. ಇಷ್ಟಾದರೂ ಅದು
ಜಾರಿಯಾಗಿರಲಿಲ್ಲ.

ಇದನ್ನು ಭೂಮಾಲೀಕರು ಪ್ರಶ್ನಿಸಿ ಕೋರ್ಟ್‌ಗೆ ಹೋದರು. ಇದು ಸುಪ್ರೀಂಕೋರ್ಟ್‌ವರೆಗೂ ಹೋಯಿತು. ಸಚಿವರೇ
ಕಡತದಲ್ಲಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಿ ಎಂದು ಬರೆದಿದ್ದಾರೆ. ಅಧಿಕಾರಿಗಳು ಕೇಳುತ್ತಿಲ್ಲ ಎಂದು ದೂರಿದ್ದರು. ಇದಕ್ಕೆ
ಸಂಬಂಧಿಸಿದ ದಾಖಲೆಗಳನ್ನೂ ಅವರು ಕೋರ್ಟ್ ಮುಂದೆ ಮಂಡಿಸಿದ್ದರು. ಸದರಿ ದಾಖಲೆಗಳನ್ನು ಕೋರ್ಟ್‌ಗೆ
ಸಲ್ಲಿಸುವಂತೆ ಕೋರ್ಟ್, ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿತು. ನಂತರ ಇಲಾಖೆಯಲ್ಲಿ ಕಡತಗಳಿಗಾಗಿ
ಹುಡುಕಾಡಿದಾಗ ಅವು ನಾಪತ್ತೆಯಾಗಿರುವುದು ಗೊತ್ತಾಗಿದೆ.

ಕಡತ ಸಂಖ್ಯೆ ನಅಇ 172 ಬೆಮಪ್ರಾ 1998 ಮತ್ತು ನಅಇ 118 ಬೆಮಪ್ರಾ 2000- ಈ ಎರಡೂ ಕಡತಗಳು
ನಾಪತ್ತೆಯಾಗಿರುವುದಕ್ಕೆ ಕಾರಣ ಯಾರು? ಅವರ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂಬುದರ ಬಗ್ಗೆ ಮಾಹಿತಿ
ನೀಡುವಂತೆ ಕೋರ್ಟ್ ಸೂಚಿಸಿತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಆರು ಮಂದಿಯನ್ನು ಅಮಾನತು ಮಾಡಿದ್ದು, ಈ
ವಿಷಯವನ್ನು ಸರ್ಕಾರ ಕೋರ್ಟ್‌ಗೆ ವಿವರಿಸಲಿದೆ ಎಂದು ಗೊತ್ತಾಗಿದೆ.

Tuesday, September 7, 2010

ನ್ಯೂಜೆರ್ಸಿ ‘ಅಕ್ಕ’ ಸಮ್ಮೇಳನದಲ್ಲಿ ರಾಜ್ಯ ನಿಯೋಗದ ನಾಯಿಪಾಡು

http://www.prajavani.net/Content/Sep72010/state20100906203127.asp?section=updatenews


ತೆರಿಗೆದಾರನ ಹಣದಲ್ಲಿ ಮಜಾ ಉಡಾಯಿಸಲು ಅಮೆರಿಕಾಕ್ಕೆ ಹೋಗಿದ್ದ ಖದೀಮರಿಗೆ ತಕ್ಕ ಶಾಸ್ತಿಯಾಗಿದೆ. ಇನ್ನಾದರೂ ವಿವಿಧ ಕ್ಷೇತ್ರಗಳಲ್ಲಿ* ರಾಜಕೀಯ ಮಾಡುತ್ತಿರುವ ಈ ಪುಡಾರಿಗಳು ಒಂದಿಷ್ಟು ಬುದ್ದಿಕಲಿಯಲಿ.

*(ಹಿಂದೂಸ್ತಾನಿ ಗಾಯಕರು, ಕವಿಗಳು, ಚಲನಚಿತ್ರ ನಟರು, ವಿಶ್ವವಿದ್ಯಾಲಯದ ಕುಲಪತಿಗಳು)

Monday, September 6, 2010

Irregular appointments in Mysore University

ಮೈಸೂರು ವಿವಿ ಅಕ್ರಮ ನೇಮಕಾತಿ ಹಗರಣ - ಮಾಜಿ ಕುಲಪತಿಗಳ ವಿರುದ್ಧ ಕ್ರಮ ಯಾಕೆ ಸಾಧ್ಯ ಇಲ್ಲ?
ಪ್ರಕಟಿಸಿದ ದಿನಾಂಕ : 2010-08-30

http://www.gulfkannadiga.com/news-30276.html


ಮೈಸೂರು: ಮಾಜಿ ಕುಲಪತಿ ಪ್ರೊ.ಜೆ.ಶಶಿಧರ ಪ್ರಸಾದ್ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂಬ ರಾಜ್ಯ ಸರ್ಕಾರದ ಆದೇಶವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿ.ಜಿ.ತಳವಾರ್ ತಕ್ಷಣ ಪಾಲಿಸಿದ್ದರೆ ಈಗಿನ ಗದ್ದಲಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಕ್ರಮ ಜರುಗಿಸಲು ಕುಲಪತಿಗಳು ಮಾಡಿದ ವಿಳಂಬವನ್ನೇ ಬಳಸಿಕೊಂಡ ರಾಜ್ಯಪಾಲ ಎಚ್.ಆರ್.ಭಾರದ್ವಾಜ ಅವರು ವಿಶ್ವವಿದ್ಯಾಲಯದ ಕಾಯಿದೆಯ ಆಯ್ದಭಾಗಗಳನ್ನಷ್ಟೇ ಉಲ್ಲೇಖಿಸುತ್ತಾ ಮಧ್ಯಪ್ರವೇಶಿಸಿದ್ದಾರೆ. ನಿಜಕ್ಕೂ ಮಾಜಿ ಕುಲಪತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಸಾಧ್ಯ ಇಲ್ಲವೇ?

ಮೈಸೂರು ವಿಶ್ವವಿದ್ಯಾಲಯದ ನೇಮಕಾತಿಯಲ್ಲಿನ ಅಕ್ರಮ ಮಾತ್ರವಲ್ಲ, ಅದನ್ನು ಮುಚ್ಚಿಹಾಕುವ ಪ್ರಯತ್ನ ಕೂಡಾ ವ್ಯವಸ್ಥಿತ ವಾಗಿ ನಡೆದಿರುವುದು ಈ ಪ್ರಕರಣದ ತನಿಖೆಯಿಂದ ಸ್ಪಷ್ಟವಾಗುತ್ತದೆ. ಮಾಜಿ ಕುಲಪತಿಗಳ ವಿರುದ್ಧ ಕ್ರಮ ಜರುಗಿಸು ವಂತೆ ರಾಜ್ಯ ಸರ್ಕಾರ ವಿಶ್ವವಿದ್ಯಾಲಯಕ್ಕೆ ಆದೇಶ ನೀಡಿದ್ದು ಕಳೆದ ಜೂನ್ ಒಂಭತ್ತರಂದು. ಇದಾದ ನಂತರ ಈ ಬಗ್ಗೆ ಚರ್ಚೆಗೆ ಕುಲಪತಿಗಳು ಜೂನ್ 15ಕ್ಕೆ ಸಿಂಡಿಕೇಟ್‌ನ ವಿಶೇಷ ಸಭೆ ಕರೆಯುತ್ತಾರೆ. ಅದನ್ನು 19ಕ್ಕೆ ಮುಂದೂಡಲಾಗುತ್ತದೆ. ಮತ್ತೊಮ್ಮೆ ಮುಂದೂಡಿ ಕೊನೆಗೆ ಜೂನ್ 24ರ ಮಧ್ಯಾಹ್ನ ಮೂರು ಗಂಟೆಗೆ ಸಿಂಡಿಕೇಟ್ ಸಭೆ ನಿಗದಿಪಡಿಸಲಾಗುತ್ತದೆ. ಆ ಸಭೆ ನಡೆಯುವ ಒಂದು ಗಂಟೆ ಮೊದಲು ತನ್ನ ಹಿಂದಿನ ಆದೇಶದನ್ವಯ ಕ್ರಮ ಕೈಗೊಳ್ಳದಂತೆ ನಿರ್ದೇಶನ ನೀಡಿದ ರಾಜ್ಯ ಸರ್ಕಾರದ ಪತ್ರ ವೊಂದು ಫ್ಯಾಕ್ಸ್ ಮೂಲಕ ಬರುತ್ತದೆ. ಈ ಹದಿನೈದು ದಿನಗಳ ಅವಧಿಯಲ್ಲಿ ನಡೆದದ್ದೇನು ಎಂಬುದು ಬಹಿರಂಗಗೊಂಡರೆ ಅಕ್ರಮ ನೇಮಕಾತಿ ಹಗರಣದ ಇನ್ನೊಂದು ಮುಖವೂ ಬಯಲಾಗಬಹುದು.

ಸಾಯಿಬಾಬಾ ಪವಾಡ?

ಈ ಅವಧಿಯಲ್ಲಿಯೇ ಪ್ರೊ.ಶಶಿಧರ ಪ್ರಸಾದ್ ಅವರು ಪುಟ್ಟಪರ್ತಿ ಸತ್ಯಸಾಯಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ್ದು. ಆದ್ದರಿಂದ ಹದಿನೈದು ದಿನಗಳ ಅವಧಿಯಲ್ಲಿ ನಡೆದ ರಾಜ್ಯಪಾಲರ ಮಧ್ಯಪ್ರವೇಶ ಮತ್ತು ಬದಲಾದ ಸರ್ಕಾರದ ನಿಲುವಿಗೆ 'ಸಾಯಿಬಾಬಾರ ಪವಾಡ' ಕಾರಣ ಎನ್ನುವವರಿದ್ದಾರೆ. ಆದರೆ ರಾಜ್ಯಪಾಲ ಭಾರದ್ವಾಜ ಅವರು ನೀಡಿರುವ ಕಾರಣವೇ ಬೇರೆ.

ಕುಲಪತಿ ಇಲ್ಲವೇ ವಿಶ್ವವಿದ್ಯಾಲಯದ ಸಿಬ್ಬಂದಿ ವಿರುದ್ಧ ಆರೋಪ ಕೇಳಿಬಂದಾಗ ಕರ್ನಾಟಕ ವಿಶ್ವವಿದ್ಯಾಲಯದ ಕಾಯಿದೆಯ ಸೆಕ್ಷನ್ 8ರ ಪ್ರಕಾರ ಕುಲಾಧಿಪತಿಗಳಾದ ರಾಜ್ಯಪಾಲರು ಸ್ವಪ್ರೇರಣೆಯಿಂದ ವಿಚಾರಣೆಗೆ ಆದೇಶ ನೀಡಬಹುದು. ಇಲ್ಲವೇ ತನಿಖೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸಬಹುದು. ಸೆಕ್ಷನ್ 8(4)ರ ಪ್ರಕಾರ ವಿಚಾರಣಾ ವರದಿಯನ್ನು ಸ್ವೀಕರಿಸಿದ ನಂತರ ಅಗತ್ಯ ಕಂಡುಬಂದರೆ ಕ್ರಮಕೈಗೊಳ್ಳುವಂತೆ ಕುಲಾಧಿಪತಿಗಳು ಸರ್ಕಾರಕ್ಕೆ ನಿರ್ದೇಶನ ನೀಡಬಹುದು. ಒಂದು ವೇಳೆ ಸರ್ಕಾರ ಆದೇಶವನ್ನು ಪಾಲಿಸಲು ಕುಲಪತಿಗಳು ವಿಫಲವಾದರೆ ಅದನ್ನು ಸರ್ಕಾರ ಕುಲಾಧಿಪತಿಗಳ ಗಮನಕ್ಕೆ ತರಬೇಕು. ಅಂತಿಮ ವಾಗಿ ರಾಜ್ಯಪಾಲರ ಆದೇಶವನ್ನು ಕುಲಪತಿಗಳು ಪಾಲಿಸಬೇಕಾಗುತ್ತದೆ.

ರಾಜ್ಯಪಾಲ ಭಾರದ್ವಾಜ ಅವರು ಮತ್ತೆಮತ್ತೆ ಉಲ್ಲೇಖಿಸುತ್ತಿರುವುದು ಈ ಸೆಕ್ಷನ್ 8 ಅನ್ನು ಮಾತ್ರ. ಕುಲಪತಿಗಳ ವಜಾಕ್ಕೆ ಸಂಬಂಧಿಸಿದ ಸೆಕ್ಷನ್ 14(7) ಅನ್ನು ಅವರು ಪ್ರಸ್ತಾಪಿಸುತ್ತಲೇ ಇಲ್ಲ. ಈ ಸೆಕ್ಷನ್ ಪ್ರಕಾರ '...ವಿಶ್ವವಿದ್ಯಾಲಯದ ಕಾಯಿದೆಯ ಉಲ್ಲಂಘನೆ ಇಲ್ಲವೇ ಅಧಿಕಾರದ ದುರುಪಯೋಗ ನಡೆದಿರುವುದು ತನಿಖೆಯಿಂದ ಸಾಬೀತಾದರೆ ಕುಲಪತಿಗಳನ್ನು ವಜಾ ಮಾಡಬಹುದು...'

ಆದರೆ ಪ್ರೊ.ಶಶಿಧರಪ್ರಸಾದ್ ಅವರು ಅಧಿಕಾರದಲ್ಲಿ ಇಲ್ಲದೆ ಇರುವುದರಿಂದ ಅವರನ್ನು ವಜಾ ಮಾಡುವ ಪ್ರಶ್ನೆ ಉದ್ಭವಿಸದು. ಅವರು ಕುಲಪತಿಗಳಲ್ಲದೆ ಇರುವುದರಿಂದ ವಿಶ್ವವಿದ್ಯಾಲಯದ ಕಾಯಿದೆಯಲ್ಲಿನ ಯಾವ ರಕ್ಷಣೆಯೂ ಅವರಿಗೆ ಸಿಗದು. ಆದ್ದರಿಂದ ಇಂತಹ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ವೈಯಕ್ತಿಕ ನೆಲೆಯಲ್ಲಿ ಅಪರಾಧ ಎಸಗಿದ್ದರೆ, ಆತನ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಲು ಸಾಧ್ಯ ಇದೆ ಎನ್ನುತ್ತಾರೆ ಕಾನೂನು ತಜ್ಞರು.

ಮೈಸೂರು ವಿ.ವಿ.ನೇಮಕಾತಿಗೆ ಸಂಬಂಧಿಸಿ ಮಾಡಲಾದ ಮುಖ್ಯ ಆರೋಪ ಮೀಸಲಾತಿ ಉಲ್ಲಂಘನೆಯದ್ದು. 12 ಪ್ರೊಫೆಸರ್, 28 ರೀಡರ್ಸ್‌ ಮತ್ತು 15 ಉಪನ್ಯಾಸಕರ ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ ಆ ಕಾಲದಲ್ಲಿ ಕುಲಪತಿಯಾಗಿದ್ದ ಶಶಿಧರಪ್ರಸಾದ್ ಅವರು ರಾಜ್ಯಸರ್ಕಾರದ 25-6-1995ರ ಆದೇಶವನ್ನು ಉಲ್ಲಂಘಿಸಿ ' 'ಬೇರೆ ವರ್ಗಗಳ'(ಮೀಸಲಾತಿಗೆ ಅರ್ಹರಲ್ಲದ) ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಈ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಮೀಸಲಾತಿ ವರ್ಗೀಕರಣ ಮತ್ತು ಅರ್ಜಿಗಳನ್ನು ಆಹ್ಹಾನಿಸಿ ನೀಡಲಾದ ಜಾಹೀರಾತನ್ನು ನೀಡಿದ್ದು

ವಿಶ್ವವಿದ್ಯಾಲಯವಾಗಿರುವ ಕಾರಣ ಕೇವಲ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ನೇಮಕಾತಿ ಮಂಡಳಿ ಸದಸ್ಯರ ಪಾತ್ರ ಅಕ್ರಮದಲ್ಲಿ ಇಲ್ಲ' ಎಂದು ನ್ಯಾಯಮೂರ್ತಿ ರಂಗ ವಿಠಲಾಚಾರ್ ಸಮಿತಿ ಅಭಿಪ್ರಾಯಪಟ್ಟಿದೆ. ಈ ಮೂಲಕ ಕ್ರಿಮಿನಲ್ ಅಪರಾಧವಾಗಿರುವ ಮೀಸ ಲಾತಿ ಉಲ್ಲಂಘನೆಗೆ ಕುಲಪತಿಯೊಬ್ಬರೇ ಹೊಣೆ ಎಂದು ಹೇಳಿದೆ.

ತನಿಖಾ ಸಮಿತಿ ನೇಮಕಾತಿ ಮಂಡಳಿ ಸದಸ್ಯರನ್ನು ಹೊಣೆಗಾರರನ್ನಾಗಿ ಮಾಡಿದ್ದು ನಾಲ್ಕು ಪ್ರೊಫೆಸರ್, 11 ರೀಡರ್, 33 ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿ ಮಾತ್ರ. ವಾಣಿಜ್ಯ ವಿಭಾಗದ ಪ್ರೊಫೆಸರ್ ಹುದ್ದೆಗೆ ಆಯ್ಕೆ ಮಂಡಳಿ ಆಯ್ಕೆ ಮಾಡಿದ ಅಭ್ಯರ್ಥಿಗಳ ಬದಲಿಗೆ ಬೇರೆ ಇಬ್ಬರನ್ನು ಆಯ್ಕೆ ಮಾಡುವ ಮೂಲಕ 'ವಿಶ್ವವಿದ್ಯಾಲಯ ಸಂದರ್ಶನ ನಿರ್ವಹಣಾ'ಕಾಯಿದೆಯನ್ನು ಉಲ್ಲಂಘಿಸಲಾಗಿದೆ. ಈ ಅಪರಾಧಕ್ಕೆ ನೇಮಕಾತಿ ಮಂಡಳಿ ಸದಸ್ಯರು ಕೂಡಾ ಹೊಣೆಗಾರರು ಎಂದು ತನಿಖಾ ಸಮಿತಿ ಹೇಳಿದೆ.

ಯಾರು ಯಾವ ತಪ್ಪು ಮಾಡಿದ್ದಾರೆ ಮತ್ತು ಅದಕ್ಕೆ ಸಂಬಂಧಿಸಿ ಕೈಗೊಳ್ಳಬೇಕಾದ ಕ್ರಮವೆನೆಂಬುದನ್ನು ಸೂಚಿಸಿದ್ದ ತನಿಖಾ ಸಮಿತಿ ಮುಖ್ಯಸ್ಥರು, ಒಂದು ಕಾಲದಲ್ಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿದ್ದವರು. ಇಂತಹ ಕ್ರಮ ಸಾಧ್ಯ ಇಲ್ಲ ಎಂದು ಹೇಳುತ್ತಿರುವ ರಾಜ್ಯಪಾಲರು ಒಂದು ಕಾಲದಲ್ಲಿ ನ್ಯಾಯವಾದಿಗಳಾಗಿದ್ದವರು ಮತ್ತು ಜತೆಯಲ್ಲಿಯೇ ರಾಜಕಾರಣದಲ್ಲಿದ್ದವರು. ಜನರು ಯಾರನ್ನು ನಂಬಬೇಕು?

ಮೈಸೂರು ವೈದ್ಯಕೀಯ ಕಾಲೇಜು ಬೋಧಕ ಸಿಬ್ಬಂದಿ ನೇಮಕದಲ್ಲೂ ಅಕ್ರಮ

ಪ್ರಜಾವಾಣಿ ವಾರ್ತೆ,ಭಾನುವಾರ , ಅಗಸ್ಟ್ 29, 2010
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಬೋಧಕ ಹುದ್ದೆಗಳ ನೇಮಕಾತಿಯಲ್ಲಿಯೂ ಅಕ್ರಮ ನಡೆದಿರುವುದು ಬಹಿರಂಗಗೊಂಡಿದೆ.


ಮೈಸೂರು: ಬೋಧಕೇತರ ಹುದ್ದೆಗಳ ಅಕ್ರಮ ನೇಮಕಾತಿ ನಡೆದಿದೆ ಎಂದು ವಿವಾದಕ್ಕೀಡಾಗಿರುವ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಬೋಧಕ ಹುದ್ದೆಗಳ ನೇಮಕಾತಿಯಲ್ಲಿಯೂ ಅಕ್ರಮ ನಡೆದಿರುವುದು ಬಹಿರಂಗಗೊಂಡಿದೆ.

ಮೈಸೂರು ವಿಭಾಗೀಯ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಮತ್ತು ಅಧಿಕಾರಿಗಳ ಪರಿಷತ್ ಮಾಹಿತಿ ಹಕ್ಕು ಕಾಯ್ದೆ ಮೂಲಕ ಪಡೆದುಕೊಂಡ ದಾಖಲೆಗಳ ಪ್ರಕಾರ 2007ರಿಂದ 2010ರ ವೇಳೆಯಲ್ಲಿ ನೇಮಕ ಮಾಡಿಕೊಳ್ಳಲಾದ 140 ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಖಚಿತವಾಗಿದೆ. ಪರಿಷತ್‌ನ ಅಧ್ಯಕ್ಷ ಶಾಂತರಾಜು ಮತ್ತು ಕಾರ್ಯದರ್ಶಿ ಚಿಕ್ಕಂದಾನಿ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ದಾಖಲೆಗಳನ್ನು ಬಹಿರಂಗಪಡಿಸಿದರು.

ತಾತ್ಕಾಲಿಕ ಹುದ್ದೆಗಳಿಗೆ ಮಾತ್ರ ನೇರ ನೇಮಕಾತಿ ಮಾಡಿಕೊಳ್ಳಲು ಅವಕಾಶವಿದ್ದರೂ ನಿಯಮ ಉಲ್ಲಂಘಿಸಿ ನೇರ ನೇಮಕಾತಿಯ ಮೂಲಕ ಕಾಯಂ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಸ್ವಾಯತ್ತ ಸಂಸ್ಥೆಯಾಗಿ 3 ವರ್ಷ ಕಳೆದರೂ ಇನ್ನೂ ನೇಮಕಾತಿ ಸಂಬಂಧ ನಿಯಮಾವಳಿ ರೂಪಿಸಿಲ್ಲ. ಅಲ್ಲದೆ ಸ್ವಾಯತ್ತ ಸಂಸ್ಥೆ ನೋಂದಣಿಯನ್ನೂ ನವೀಕರಿಸಿಲ್ಲ.

ನೇಮಕಾತಿ ಮಾಡಿಕೊಳ್ಳುವಾಗ ಸರ್ಕಾರದ ಅನುಮತಿಯನ್ನು ಪಡೆಯದೆ ವೈದ್ಯಕೀಯ ಶಿಕ್ಷಣ ಸಚಿವರ ನೇತೃತ್ವದಲ್ಲಿ ನಡೆದ ಗೌರ್ನಿಂಗ್ ಕೌನ್ಸಿಲ್ ಸಭೆಯ ನಿರ್ಧಾರವನ್ನು ಆಧರಿಸಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಇನ್ನೂ ವಿಚಿತ್ರ ಎಂದರೆ ನೇರ ನೇಮಕಾತಿಗೆ ಹಾಜರಾಗದ ಅಭ್ಯರ್ಥಿಯೊಬ್ಬರಿಗೆ ನೇಮಕಾತಿ ಆದೇಶವನ್ನು ನೀಡಲಾಗಿದೆ.

ಡಾ.ಉಮಾರಾಣಿ ಅವರು ಮೈಸೂರು ಕಲ್ಯಾಣಗಿರಿಯ ಕೇಂದ್ರ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿದ್ದು ನೇರ ಸಂದರ್ಶನ ನಡೆದ 2007ರ ಮಾರ್ಚ್ 15 ಮತ್ತು 16ರಂದು ಅವರು ಕಲ್ಯಾಣಗಿರಿಯ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದರು. ಹಾಜರಾತಿ ಪುಸ್ತಕದಲ್ಲಿಯೂ ಸಹಿ ಮಾಡಿದ್ದರು. ಸಂದರ್ಶನಕ್ಕೆ ಹಾಜರಾಗದಿದ್ದರೂ ಅವರು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದಾರೆ.

ಇನ್ನು ಕೆಲವು ಸಹಾಯಕ ಪ್ರಾಧ್ಯಾಪಕರಿಗೆ ನಿಯಮ ಬಾಹಿರವಾಗಿ ಪ್ರಾಧ್ಯಾಪಕ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. 2007ರ ಮಾರ್ಚ್ 15 ಮತ್ತು 16ರಂದು ನೇರ ಸಂದರ್ಶನ ನಡೆಸಿದಾಗ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ 64 ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದರು. ಇವರಲ್ಲಿ 47 ಮಂದಿಗೆ 3 ವರ್ಷದ ಬೋಧನಾ ಅನುಭವ ಇಲ್ಲ ಎಂದು ಅನರ್ಹಗೊಳಿಸಲಾಗಿದೆ. ಆದರೆ 3 ಅಭ್ಯರ್ಥಿಗಳನ್ನು ಅನುಭವ ಇಲ್ಲದಿದ್ದರೂ ಉಪನ್ಯಾಸಕ ಹುದ್ದೆಗೆ ಎಂದು ಪರಿಗಣಿಸಿ ಸಂದರ್ಶನದ ಅಂಕಗಳನ್ನೂ ನೀಡದೆ ಅವರನ್ನು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿದೆ.

ನಿಗದಿತ ವಯೋಮಿತಿ ಮೀರಿದ ಅಭ್ಯರ್ಥಿಗಳನ್ನೂ ನೇಮಕಾತಿ ಮಾಡಿಕೊಳ್ಳಲಾಗಿದೆ. ನೇರ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿ ಮೈಕ್ರೊಬಯಾಲಜಿಯ ಡಾ.ದೀಪಾ ಅವರನ್ನು ಕೈಬಿಟ್ಟು ಆಯ್ಕೆಯಾಗದ ಅಭ್ಯರ್ಥಿ ಡಾ.ಮೈತ್ರಿ ಅವರಿಗೆ ನೇಮಕಾತಿ ಪತ್ರ ನೀಡಲಾಗಿದೆ. ಅರ್ಹ ಅಭ್ಯರ್ಥಿಗಳಿದ್ದರೂ ನಿವೃತ್ತರನ್ನು ಕೆಲವು ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ನಿವೃತ್ತರಾದ ಡಾ.ಎಸ್.ಪಿ.ಯೋಗಣ್ಣ ಅವರನ್ನು ಸೀನಿಯರ್ ರೆಸಿಡೆಂಟ್ ಲಯಸನ್ ಅಧಿಕಾರಿ ಎಂದು ನೇಮಕ ಮಾಡಿಕೊಳ್ಳಲಾಗಿದೆ. ಲಯಸನ್ ಅಧಿಕಾರಿ ಹುದ್ದೆಗೆ ಸರ್ಕಾರದ ಅನುಮತಿ ಇಲ್ಲ. ವೈದ್ಯಕೀಯ ದಾಖಲಾತಿ ವಿಭಾಗಕ್ಕೆ ಶ್ಯಾಮಸುಂದರ್ ಎಂಬ ನಿವೃತ್ತರನ್ನು ನೇಮಕ ಮಾಡಲಾಗಿದೆ.

ಮೊದಲನೆ ನೇರ ನೇಮಕಾತಿ ಸಂದರ್ಶನ ಕಾಲದಲ್ಲಿ ಸೇವಾ ನಿರತ ಅಭ್ಯರ್ಥಿಗಳನ್ನು ಪರಿಗಣಿಸುವುದಿಲ್ಲ ಎಂದು ನಿರ್ಬಂಧಿಸಲಾಗಿದೆ. ಪ್ರೊಫೆಸರ್ ಹುದ್ದೆ ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗೆ ಸಹಾಯಕ ಪ್ರೊಫೆಸರ್ ಹುದ್ದೆ ನೀಡಲಾಗಿದೆ. ಉಪನ್ಯಾಸಕ ಹುದ್ದೆ ಸಂದರ್ಶನಕ್ಕೆ ಬಂದವರಿಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಯನ್ನು ನೀಡಲಾಗಿದೆ. ಹುದ್ದೆಗೆ ನೇಮಕಗೊಂಡು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದ ಅಭ್ಯರ್ಥಿಗಳನ್ನು ಒಂದು ವರ್ಷ ಬಿಟ್ಟು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ.

ಇನ್ನೂ ತಮಾಷೆ ಎಂದರೆ ನೇಮಕಾತಿ ಪ್ರಕಟಣೆ ನೀಡಿದ ಸಂಖ್ಯೆಯ ಹುದ್ದೆಗಳಿಗಿಂತ ಹೆಚ್ಚು ಸಂಖ್ಯೆಯ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಪೆಥಾಲಜಿ ವಿಭಾಗದಲ್ಲಿ 2 ಸಹ ಪ್ರಾಧ್ಯಾಪಕರ ಹುದ್ದೆಗಳಿಗೆ ಸಂದರ್ಶನಕ್ಕೆ ಕರೆದಿದ್ದರೆ ಮೂರು ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.

ಅದೇ ರೀತಿ ಒಂದು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸಂದರ್ಶನಕ್ಕೆ ಕರೆದಿದ್ದರೆ 3 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಹೀಗೆ ಬೋಧಕ ಹುದ್ದೆಗಳ ನೇಮಕದಲ್ಲಿಯೂ ಸಾಕಷ್ಟು ಅಕ್ರಮಗಳು ನಡೆದಿದ್ದು ಈಗಾಗಲೇ ಸರ್ಕಾರ ಬೋಧಕೇತರ ಹುದ್ದೆಗಳ ನೇಮಕ ರದ್ದು ಮಾಡಿದಂತೆ ಈ ಎಲ್ಲ ಬೋಧಕ ಹುದ್ದೆಗಳ ನೇಮಕಗಳನ್ನು ರದ್ದು ಮಾಡಿ ಹೊಸದಾಗಿ ನೇಮಕಾತಿ ಮಾಡಿಕೊಳ್ಳುವಂತೆ ಮೈಸೂರು ವಿಭಾಗೀಯ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಮತ್ತು ಅಧಿಕಾರಿಗಳ ಪರಿಷತ್‌ನ ಅಧ್ಯಕ್ಷ ಶಾಂತರಾಜು ಮತ್ತು ಕಾರ್ಯದರ್ಶಿ ಚಿಕ್ಕಂದಾನಿ ಗೋಷ್ಠಿಯಲ್ಲಿ ಒತ್ತಾಯಿಸಿದರು

ಬಗೆದಷ್ಟೂ ಸಿಗುವ ಅಕ್ರಮಗಳ ಸರಮಾಲೆ (prajavani sept 6,2010)

Prajavani Sept 6, 2010


ಬಗೆದಷ್ಟೂ ಸಿಗುವ ಅಕ್ರಮಗಳ ಸರಮಾಲೆ

ರವೀಂದ್ರ ಭಟ್ಟ



ಇಲ್ಲಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಅಕ್ರಮಗಳ ಸರಮಾಲೆ ಒಳಹೊಕ್ಕು ನೋಡಿದರೆ ಸಿಗುತ್ತಲೇ ಇವೆ.


ಮೈಸೂರು: 2007ರ ಮಾರ್ಚ್ 15 ಮತ್ತು 16ರಂದು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಡೆಸಿದ ಸಂದರ್ಶನಕ್ಕೆ ಹಾಜರಾದವರ ಸಂಖ್ಯೆ 64. ಇದರಲ್ಲಿ 47 ಅಭ್ಯರ್ಥಿಗಳನ್ನು ಕನಿಷ್ಠ 3 ವರ್ಷದ ಬೋಧನಾ ಅನುಭವ ಇಲ್ಲ ಎಂಬ ಕಾರಣಕ್ಕೆ ಅನರ್ಹಗೊಳಿಸಲಾಗಿದೆ.

ಆದರೆ ಫಿಸಿಯಾಲಜಿ ವಿಭಾಗಕ್ಕೆ ಯಾವುದೇ ಬೋಧನಾನುಭವ ಇಲ್ಲದ ಡಾ.ಕೆ.ಕೆ.ಕಸ್ತೂರಿ, ಕೇವಲ ಒಂದು ವರ್ಷ ಮಾತ್ರ ಅನುಭವ ಇರುವ ಡಾ.ಸೀಮಾ ದೀಪಕ್ ಅವರನ್ನು ಅನಾಟಮಿ ವಿಭಾಗಕ್ಕೆ ಹಾಗೂ ಕೇವಲ 2 ವರ್ಷ ಅನುಭವ ಇರುವ ಡಾ.ಬಿ.ಎನ್.ನಂದೀಶ್ ಅವರನ್ನು ಪೆಥಾಲಜಿ ವಿಭಾಗಕ್ಕೆ ನೇಮಕಾತಿ ನೀಡಲಾಗಿದೆ.

2008ರ ಜೂನ್ 25ರಂದು ನಡೆದ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಬಿಟ್ಟು ಆಯ್ಕೆಯಾಗದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗಿದೆ. ಮೈಕ್ರೋಬಯಾಲಜಿ ವಿಭಾಗದಲ್ಲಿ ಡಾ.ಮೈತ್ರಿ ಆಯ್ಕೆಯಾಗಿದ್ದರೆ ಯಾವುದೇ ಬೋಧನಾ ಅನುಭವ ಇಲ್ಲದ ಡಾ. ಎಸ್.ದೀಪ ಅವರಿಗೆ ನೇಮಕಾತಿ ಪತ್ರ ನೀಡಲಾಗಿದೆ. ಅದೇ ರೀತಿ ಅನಾಟಮಿ ವಿಭಾಗಕ್ಕೆ ಸಹಾಯಕ ಪ್ರಾಧ್ಯಾಪಕರಾಗಿ ಡಾ.ಸುಮತಿ ಎಸ್ ಅವರು ಸಂದರ್ಶನದಲ್ಲಿ ಆಯ್ಕೆಯಾಗಿದ್ದರೂ ಅವರ ಬದಲು ಕೇವಲ ಒಂದು ವರ್ಷ 6 ತಿಂಗಳ ಅನುಭವ ಇರುವ ಡಾ.ಗೀತಾಂಜಲಿ ಅವರಿಗೆ ನೇಮಕಾತಿ ಪತ್ರ ನೀಡಲಾಗಿದೆ.


ಸಂದರ್ಶನದಲ್ಲಿ ಆಯ್ಕೆಯಾಗಿ ನೇಮಕಾತಿ ಪತ್ರ ಪಡೆದ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲದ ನಂತರ ಬಂದ ಅಭ್ಯರ್ಥಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. 2007ರ ಮಾರ್ಚ್ 15ರಂದು ನಡೆದ ಸಂದರ್ಶನದಲ್ಲಿ ಬಯೋಕೆಮಿಸ್ಟ್ರಿ ವಿಭಾಗಕ್ಕೆ ಆಯ್ಕೆಯಾದ ಡಾ.ಮೀರಾ ಎಸ್ ಅವರು ಒಂದು ವರ್ಷ 6 ತಿಂಗಳ ನಂತರ ಕೆಲಸಕ್ಕೆ ಹಾಜರಾಗಿದ್ದಾರೆ.

ಫಿಸಿಯಾಲಜಿ ವಿಭಾಗದ ಡಾ.ತೇಜಸ್ವಿನಿ ಕೂಡ ಒಂದೂವರೆ ವರ್ಷದ ನಂತರ ಹಾಗೂ ಡಾ.ಪೂರ್ಣಿಮಾ ಬಿ.ಸಿ. ಅವರು ಒಂದು ವರ್ಷ ನಾಲ್ಕು ತಿಂಗಳ ನಂತರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇನ್ನೂ ಅದ್ಭುತ ಎಂದರೆ ಕೆಲವು ವಿಭಾಗಗಳಿಗೆ ನೇರ ನೇಮಕಾತಿಗೆ ಪ್ರಕಟಣೆ ಹೊರಡಿಸಿದ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ರೋಗಲಕ್ಷಣ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರ ಎರಡು ಹುದ್ದೆಗೆ ಅರ್ಜಿ ಕರೆಯಲಾಗಿತ್ತು. ಆದರೆ ಡಾ.ಶಿಲ್ಪ, ಡಾ.ಶರತ್ ಮತ್ತು ಡಾ.ರಮೇಶ್ ಎಂಬ ಮೂವರಿಗೆ ನೇಮಕಾತಿ ನೀಡಲಾಗಿದೆ. ಅದೇ ರೀತಿ ಒಂದು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಕರೆದು ಡಾ.ಸುಮನ, ಡಾ.ವಿದ್ಯಾ ವಾಸುದೇವ, ಡಾ.ಅದಿಲ್ ಅವರಿಗೆ ನೇಮಕಾತಿ ಪತ್ರ ನೀಡಲಾಗಿದೆ.

ಅಭ್ಯರ್ಥಿಗಳ ವಿದ್ಯಾರ್ಹತೆ ಪ್ರಮಾಣ ಪತ್ರ, ಪೂರ್ವವೃತ್ತ ಸಿಂಧುತ್ವ ಪ್ರಮಾಣಪತ್ರಗಳ ಪರಿಶೀಲನೆ ಮಾಡದೆ ನೇಮಕಾತಿಗಳನ್ನು ಮಾಡಿಕೊಳ್ಳಲಾಗಿದೆ. ಇದು ನಮಗೆ ಸಿಕ್ಕಿದ್ದು. ಒಳಹೊಕ್ಕು ನೋಡಿದರೆ ಸಿಗೋದು ಇನ್ನೆಷ್ಟೋ?