Sunday, November 17, 2013

371 J ಮತ್ತು ಜಾತಿ ರಾಜಕೀಯ !

ಹಿಂದುಳಿದ ಪ್ರಾಂತ್ಯದ ಉದ್ಧಾರಕ್ಕಾಗಿ  ಸಂವಿಧಾನಕ್ಕೆ  ತಿದ್ದುಪಡಿ ಮಾಡಿ   371 ಜೆ   ಸೇರಿಸಿದ್ದು  ಹಾಗೂ ಅದರಲ್ಲಿ  ಸರ್ಕಾರದ ನೇಮಕಾತಿ ಬಡ್ತಿ ಮುಂತಾದ ವಿಷಯಗಳಲ್ಲಿ  ಈ ಪ್ರಾಂತ್ಯದ ಜನರಿಗೆ ಪ್ರಾತಿನಿದ್ಯ ಕಲ್ಪಿಸಿದ್ದು ಎಷ್ಟರಮಟ್ಟಿ ಉಪಯೋಗವಾಯಿತು ಗೊತ್ತಿಲ್ಲ . ಆದರೆ ಅದು ಕರ್ನಾಟಕ ಸರ್ಕಾರದ ಸಚಿವಾಲಯದ ಮೊಗಸಾಲೆಯಲ್ಲಿನ ಜಾತಿ ರಾಜಕೀಯಕ್ಕೆ ಒಂದಿಸ್ಟು ಟ್ವಿಸ್ಟ್ ನೀಡಿದೆ . ಇಲ್ಲಿ ಕೆಲಸ ಮಾಡದೇ ಓತ್ಲಾ ಹೊಡಕೊಂಡು ಕ್ಲಬ್ಬು ,ಸಹಕಾರಿ ಬ್ಯಾಂಕು ಸಂಘ, ಲೈಬ್ರರಿ ಕಾಲಹರಣ ಮಾಡುತ್ತಾ ಕಾಲ ಕಳೆಯುವ  ಈ ಮಂದಿಯ ಮುಖ್ಯ ಉಧ್ಯೋಗವೇ ಜಾತಿ ರಾಜಕೀಯ . "ಸರ್ವೀಸ್ ಮ್ಯಾಟರ್ಸ್ " ಎಂಬ ಹಾದರ ಬಿಟ್ಟರೆ ಉಳಿದ ಕೆಲಸವನ್ನೆಲ್ಲಾ  ಕ್ಷೇತ್ರ ಇಲಾಖೆಗೆ ಡೆಲಿಗೇಟ್ ಮಾಡಿ ಆಗಿದೆ . ಈಗ ಈ 371J ಈ ಜಾತಿ ರಾಜಕೀಯಕ್ಕೆ ಹೊಸ ಆಯಾಮ ನೀಡಿದೆ . ಮೇಲೆ ಹೇಳಿದ ಎಲ್ಲಾ ಕ್ಷೇತ್ರಗಳಲ್ಲೂ ಈ ಜಾತಿಜಗಳ ಸಾಮಾನ್ಯ . ಒಮ್ಮೆ ಒಂದು ಜಾತಿಗೆ ಅಧಿಕಾರ ಬಂದರೆ ಇನ್ನೊಮ್ಮೆ ಇನ್ನೊಂದಕ್ಕೆ .(ಹೆಸರಿಗೆ ಒಂದೆರಡು ಅಹಿಂದ  ಮುಖ ಸೇರಿರುತ್ತಾರೆ ). ಸೋತವರು ಗೆದ್ದವರನ್ನು ಮೂದಲಿಸಲು ಕಾರಣ ಹುಡುಕುವಾಗ ಸಿಕ್ಕಿದೆ ಈ ೩೭೧ ಜೆ ! ನಿನ್ನಿಂದಲೇ ಇದು ಬಂತು  ಅಂತಾ ಒಂದು ಜಾತಿಯವನನ್ನು ಇನ್ನೊಂದು ಜಾತಿಯವನನ್ನು ಮೂದಲಿಸುತ್ತಾ ರಾಜಕೀಯ ಮಾಡುವುದನ್ನು ನೋಡಲು ಒಂದು ಒಳ್ಳೆ ಸೀನು ! ದಯವಿಟ್ಟು ಮಿಸ್ ಮಾಡಬೇಡಿ !

No comments:

Post a Comment