Monday, September 3, 2012

ಹಟ್ಟಿ ಅಧ್ಯಕ್ಷರ “ಅಕ್ಕ “ಯಾತ್ರೆ


ಹೋದ ವರುಷ ಅಮೇರಿಕಾದಲ್ಲಿ ನಡೆದ ಅಕ್ಕ ಸಮ್ಮೇಳನಕ್ಕೆ ಸರ್ಕಾರಿ ಖರ್ಚಿನಲ್ಲಿ ಹೋದ ನಿರ್ಲಜ್ಜ ನಿಯೋಗ ಸರಿಯಾಗಿ ಗೌರವ ಸಿಗದೇ ನಿಮ್ಮಕ್ಕನ್ ,,,,ಎಂದು ಮಕ್ಕುಗಿಸಿಕೊಂಡು ಬಂದಿದ್ದು ನಮಗೆಲ್ಲಾ ಗೊತ್ತೇ ಇದೆ. ೨೦೧೦ರಲ್ಲಿ  ನ್ಯೂ ಜೆರ್ಸಿಯಲ್ಲಿ ನಡೆದ ಅಕ್ಕ ಸಮ್ಮೇಳನಕ್ಕೆ ಸರ್ಕಾರ ೮೨ ಜನ ಕಲಾವಿದರನ್ನು ಕಳುಹಿಸಿತ್ತು.ಇವರ ಖರ್ಚಿಗೆ ೪೦ ಲಕ್ಷ ಹಾಗೂ ಸಮ್ಮೇಳನಕ್ಕೆ ೪೫ ಲಕ್ಷ ಅನುದಾನ ನೀಡಿತ್ತು.  ಈ ದುಡ್ಡನ್ನೆಲಾ ನಾವೇ ತಿನ್ನಬೇಕು ಎಂಬ ದೂರಾಲೋಚನೆ ಹೊಂದಿರುವ ಅಧಿಕಾರಶಾಹಿಗಳು ಇತರೆ ಕ್ಷೇತ್ರದ ಕೆಲವು ಸಮಾನ ಮನಸ್ಕರ ಪಟಾಲಂ ಕಟ್ಟಿಕೊಂಡು ವಿದೇಶಕ್ಕೆ  ಹೋಗಿಬರುವುದು ನಮ್ಮ ಸಂಸ್ಕೃತಿ ಒಂದು ಅವಿಬಾಜ್ಯ ಸಂಪ್ರದಾಯವಾಗಿಬಿಟ್ಟಿದೆ.ಹಾಗೆ ಹೋಗಿಬರುವ ಪುಕ್ಸಟ್ಟೆ ಪಾಪಣ್ಣಗಳನ್ನು ನಮ್ಮ ನಾಡಿನ ಸಂಸ್ಕೃತಿಯ ವಕ್ತಾರರೆಂದು ಬಿಂಬಿಸಿ ಸನ್ಮಾನಿಸುವ ಪತ್ರಿಕೆ/ಸಂಘಟನೆಗಳಿಗೇನೂ ನಮ್ಮಲ್ಲಿ ಬರವಿಲ್ಲ.
ಈ ಬಾರಿ ಅಮೆರಿಕಾದ ಅಟ್ಲಾಂಟ ,ಜಾರ್ಜಿಯಾ ದಲ್ಲಿ ನಡೆದ ಸಮಾರಂಬಕ್ಕೆ ಸರ್ಕಾರ ಇಪ್ಪತ್ತು ಲಕ್ಷ ಅನುದಾನ ನೀಡಿದೆ."ಅಕ್ಕ"ಆಯೋಜಕರು ಒಂದು ಕೋಟಿ ಅನುದಾನ ಕೇಳಿತ್ತ೦ತೆ! ) ಬರಗಾಲ ಇರುವುದರಿಂದ ಈ ಸಮ್ಮೇಳನಕ್ಕೆ ಸರ್ಕಾರದ ವೆಚ್ಚದಲ್ಲಿ ಯಾರೂ ಭಾಗವಹಿಸುವುದಿಲ್ಲ ಎಂದು ಸಿ ಎಂ ಹೇಳಿದ್ದಾರೆ.ಆದರೆ ರಾಜ್ಯ ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಕಂಪನಿ ಯ ಅಧ್ಯಕ್ಷರಾದ ಎಸ್ ವಿ ರಾಮಚಂದ್ರನವರಿಗೆ  ಈ ಅಕ್ಕ ಸಮ್ಮೇಳನದಲ್ಲಿ ಬಾಗವಹಿಸಲು ಸರ್ಕಾರ ಒಪ್ಪಿಗೆ ನೀಡಿದೆ. ದಿನಾಂಕ :28:8:2012  ರ ಸರ್ಕಾರಿ ಆದೇಶ ಸಂಖ್ಯೆ:CI:44:CMC:2012  ದಲ್ಲಿ ಇವರಿಗೆ ವಿದೇಶಿ ಯಾತ್ರೆ ನಡೆಸಲು ಅನುಮೋದನೆ ನೀಡಿರುವ ಸರ್ಕಾರ ಈ ಪ್ರವಾಸದ ವೆಚ್ಚವನ್ನು ಹಟ್ಟಿ ಚಿನ್ನದ ಗಣಿ ಕಂಪನಿ  ಬರಿಸಬೇಕೆಂದು ಆದೇಶಿಸಿದೆ.
 ಚಿನ್ನದ ಬೆಲೆ ಏರಿಕೆಯಿಂದಾಗಿ ಗಣಿ ಲಾಭದಲ್ಲಿ ನಡೆಯುತಿದೆಯೇ ಹೊರತು ಈ ಅಯೋಗ್ಯರ ಪರಿಶ್ರಮದಿಂದಲ್ಲ. ಲಾಭ ಇದೇ ಅಂದ ಕೂಡಲೇ ಅದನ್ನೆಲ್ಲಾ ತಾವೇ ತಿಂದು ತೇಗಬೇಕೆಂಬ ಮನೋಭಾವ ಎಷ್ಟು ಸೂಕ್ತ?