ಈ ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಎಂಬುದು ಬ್ರಷ್ಟರ ಲ್ಯಾಬೋರೇಟರಿ . ಇಲ್ಲಿ ಬ್ರಷ್ಟಾಚಾರ ಮಾಡೋದನ್ನು ಕಲಿತುಬಿಟ್ಟರೆ ಎಲ್ಲಿ ಕೂಡ ಬ್ರಷ್ಟಾಚಾರ ಮಾಡಬಹುದು. ಅದಕ್ಕೆಂದೇ ಐ.ಎ.ಎಸ್ ಅಧಿಕಾರಿಗಳು ಅವರ ಸಂದರ್ಶನದಲ್ಲಿ "ನಮಗೆ ಗ್ರಾಮೀಣ ಅಭಿವೃದ್ದಿ ಕ್ಷೇತ್ರದಲ್ಲಿ ಕೆಲಸ ಮಾಡಲು ತುಂಬಾ ಆಸಕ್ತಿ "ಅಂತಾ ಬೊಗಳುವುದು. ಇನ್ನು ಗ್ರಾಮೀಣ ಅಭಿವೃದ್ದಿ ಸಚಿವರಾಗುವುದ್ದಕ್ಕೆ ಎಲ್ಲಿಲ್ಲದ ಸ್ಪರ್ಧೆ. ಇನ್ನು ಈ ಇಲಾಖೆಗೆ ಈ ಓ ಆಗಿ ನಿಯೋಜನೆ ಮೇಲೆ ಬರುವವರು ಮಹಾ ಕಳ್ಳರೇ.
ಈ ವ್ಯವಸ್ಥೆ ಎಷ್ಟು ಕುಲಗೆಟ್ಟಿದೆ ಎಂದರೆ ಅಣ್ಣಾ ಹಜಾರೆ ಯ ಲೋಕಪಾಲ್ ಬಂದರೂ ಇಲ್ಲಿನ ಖಧೀಮರ ಕೂದಲೂ ಕೊಂಕುವುದಿಲ್ಲ.
ಉದಾಹರಣೆಗೆ, ಒಂದು ಜಿಲ್ಲಾ ಪಂಚಾಯತ್ ನ ಸಿ ಇ ಓ ಆಗಿದ್ದವನ ಮನೆ ಮೇಲೆ ಲೋಕಾಯುಕ್ತ ದಾಳಿಯಾಯಿತು. ಲೋಕಾಯುಕ್ತರು ಅವನನ್ನು ಅಮಾನತ್ತು ಮಾಡಿ ಅಂತಾ ಸರ್ಕಾರಕ್ಕೆ ಪತ್ರ ಬರೆದರು. ಸರ್ಕಾರ ಅವನನ್ನು ಅಮಾನತ್ತು ಮಾಡುವುದಿರಲಿ ,ಅವನನ್ನು ನಿರಫರಾಧಿ ಎಂದು ಘೋಷಿಸಿ ಪದೋನ್ನತಿ ನೀಡಿ ಪಂಚಾಯತ್ ರಾಜ್ ಇಲಾಖೆಯ ನಿರ್ಧೇಶಕ ಹುದ್ದೆ ನೀಡಿತು. ಅಲ್ಲಿ ನುಂಗಲು ಸಾಕಷ್ಟು ಅವಕಾಶ ಇಲ್ಲದ ಕಾರಣ ಅವನು ಮತ್ತೆ ಯಾವುದೋ ಜಿಲ್ಲಾ ಪಂಚಾಯತಿಗೆ ಸಿ ಇ ಓ ಆಗಿ ಹೋದ. ಹೀಗೆ ಈ ಇಲಾಖೆಯ ಕರ್ಮಕಾಂಡ ಹೇಳುತ್ತಾ ಹೋದರೆ ಅದಕ್ಕೆ ಕೊನೆ ಇರುವುದಿಲ್ಲ.ಇಲ್ಲಿಯವರೆಗೇನೂ ಈ ಇಲಾಖೆಗೆ ಇಲ್ಲಿನ ಒಳಹೊರವನ್ನು ಅರಿತಿದ್ದ ಕಚಡಾ ಜನಗಳೇ ನಿಯೋಜನೆ ಮೇಲೆ ಹೋಗುತಿದ್ದರು. ಆದರೆ ಈ ನುಂಗಣ್ಣಗಳ ನಡುವೆ ಪಿ ಡಿ ಓ ಎಂಬ ಮುಗ್ಧರನ್ನು ಸೇರಿಸಲಾಯಿತು. ಗ್ರಾಮೀಣ ಅಭಿವೃದ್ದಿ ಎಂಬ ಮಾಯಾ ಜಿಂಕೆಯಿಂದ ಆಕರ್ಷಿತರಾಗಿ ಇಲ್ಲಿ ಸೇರಿಕೊಂಡ ನೌಕರರದು ಈಗ ನಾಯಿಪಾಡಗಿದೆ. ಇದನ್ನು ಅಗಸ್ಟ್ 21,2011 ರ ಪ್ರಜಾವಾಣಿ ಪತ್ರಿಕೆಯಲ್ಲಿ "ಪದ್ಮರಾಜ್ ದಂಡಾವತಿ " ಸೊಗಸಾಗಿ ಬರೆದಿದ್ದಾರೆ. ಅದನ್ನು ಓದಲು ಈ ಕೆಳಗಿನ "ಲಿಂಕ್" ಹಿಂಬಾಲಿಸಿ .
No comments:
Post a Comment