ನಿಯೋಜನೆ ಮೇಲೆ ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ಹೋಗಿ ಸೇವೆ ಸಲ್ಲಿಸಲು ಇರುವ ಗರಿಷ್ಟ ಕಾಲಮಿತಿ ಐದು ವರುಷ . ಹೆಚ್ಚಾಗಿ ಜನ ಹಳ್ಳಿಗಳಿಂದ ಪಟ್ಟಣ ಸೇರಿಕೊಳ್ಳಲು ಈ ಮಾರ್ಗೋಪಾಯ ಬಳಸುತ್ತಾರೆ. ವಿಶೇಷ ತಾಂತ್ರಿಕ ಜ್ಞಾನ ,ಪರಿಣತಿ ಇರುವವರ ಸೇವೆಯನ್ನು ಇನ್ನೊಂದು ಇಲಾಖೆ ಬಳಸಿಕೊಳ್ಳಲಿ ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ಈ ನಿಯೋಜನೆಯ ಅವಕಾಶವನ್ನು ಕಲ್ಪಿಸಲಾಗಿದೆ.ಆದರೆ ಈ ಸೌಲಭ್ಯದ ಹೆಚ್ಚಿನ ಪಲಾನುಭಾವಿಗಳು ಥರ್ಡ್ ಕ್ಲಾಸ್ ಗುಮಾಸ್ತೆಯರು! . ಕುಟುಂಬದಲ್ಲಿ ರೋಗ ,ರುಜಿನ ಇರುವ ಮಂದಿ ಬೆಂಗಳೂರಿಗೆ ಬಂದು ಶೂರ್ಶುಷೆ ಪಡೆಯಲಿ ಎಂಬ ಮಾನವೀಯ ಕಾರಣಕ್ಕೆ ಈ ಸವಲತ್ತು ಮಾಡಿದರೆ ಅದನ್ನು ಕಾಲಹರಣಕ್ಕೆ ಕಚೇರಿಗೆ ಬರುವ ಮಾಡರ್ನ್ ಹೆಂಗಸರು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಇದಕ್ಕೆ ದೊಡ್ಡ ಉದಾಹರಣೆ ವಿಧಾನ ಸೌಧ . ಎಲ್ಲೋ ಒಂದು ಕಡೆ ಕೆಲಸಕ್ಕೆ ಸೇರಿ ನಂತರ ವಶೀಲಿ ಉಪಯೋಗಿಸಿ ವಿಧಾನಸೌಧ ಸೇರಿದವರು ನಂತರ ಅಲ್ಲಿಂದ ಕದಲುವುದೇ ಇಲ್ಲ. ನಿಯೋಜನೆಯ ಅವಧಿ ಐದು ವರ್ಷ ಎಂಬ ನಿಯಮ ಗಾಳಿಗೆ ತೂರಿ ಹತ್ತಾರು ವರುಷ ಇಲ್ಲೇ ಝಾಂಡಾ ಊರುತ್ತಾರೆ.
ಈಗ ನಿಮ್ಮ ಮನಸಲ್ಲಿ ಇನ್ನೊಂದು ಪ್ರಶ್ನೆ ಉದ್ಹ್ಬವಿಸಬಹುದು. " ಇಷ್ಟೆಲ್ಲಾ ಉಲ್ಲಂಘನೆ ಆಗುವ ಈ ನಿಯಮ ಯಾಕೆ ಬೇಕು? ಇದನ್ನು ನೀವು ಈ ನಿಯಮ ಮಾಡಿರುವ ಇಲಾಖೆಯವರನ್ನೇ ಕೇಳಬೇಕು . ತಮಾಷೆ ಎಂದರೆ ಈ ಅಧಿಕೃತ ಜ್ಞಾಪನ ಹೊರಡಿಸಿರುವುದು ಸಿ ಆ ಸು ಇ (ಸೇವಾ ನಿಯಮಗಳು) ಎಂಬ ಇಲಾಖೆ. ನೈತಿಕ ದಿವಾಳಿತನದ ಮೂರ್ತರೂಪದಂತಿರುವ ಈ ವಿಭಾಗದಲ್ಲೇ ನೀವು ಎಲ್ಲ ರೀತಿಯ "ಉಲ್ಲಂಘನೆ" ಗಳನ್ನೂ ನೋಡಬಹುದು. ನಿಯಮಗಳನ್ನು ರೂಪಿಸುವುದರಲ್ಲಿ ಯಾವುದೇ ವಿಶೇಷ ತಜ್ಞತೆ ಇರದ "ಟೈಪಿಸ್ಟ್ ,ಜೂನಿಯರ್ ಅಸಿಸ್ಟಂಟ್ ಶ್ರೇಣಿಯಿಂದ ಬಡ್ತಿ ಪಡೆದು ಬಂದ ಪ್ರಮೋಟಿ ಅಧಿಕಾರಿಗಳು.
ಹದಿನೈದು ಇಪ್ಪತು ವರ್ಷಗಳಿಂದ ಇಲ್ಲೇ ಇದ್ದು ವರ್ಗಾವಣೆ ನಿಯಮ ಉಲ್ಲಂಘಿಸಿರುವ ಜಡ ಜಂತುಗಳು , ಬೇರೆ ಬೇರೆ ಇಲಾಖೆಯಲ್ಲಿ ತರಹವಾರಿ ತರಲೆ ಮಾಡಿಕೊಂಡು ಅಲ್ಲಿಂದ ಸ್ವೀಪಿಂಗ್ ಸೆಕ್ಷನ್ ಗೆ ಎಸೆಯಲ್ಪಟ್ಟು ನಂತರ ವಶೀಲಿ ಮಾಡಿಕೊಂಡು ಈ ವಿಭಾಗಕ್ಕೆ ಬಂದಿರುವ ಟೈಪಿಸ್ಟ್ ಪ್ರಮೋಟಿಗಳು, ಎಲ್ಲೋ ಕಂದಾಯ ಇಲಾಖೆಯಲ್ಲಿ ಟೆಂಪೊರರಿ ಸೇರಿ ಇಲ್ಲೇ ಪರಮನೆಂಟ್ ಆಗಿ ಬೇರೂರಿರುವ ಜೂನಿಯರ್ ಅಸಿಸ್ಟಂಟ್ ಗಳು. ದೇವರು ಕೊಟ್ಟರು ಪೂಜಾರಿ ಕೊಡ ಎಂಬಂತೆ ನ್ಯಾಯಾಲಯ ತೀರ್ಪು ನೀಡಿದರೂ ಅದನ್ನು ಜಾರಿಗೊಳಿಸುವ ಬಗ್ಗೆ ಅಭಿಪ್ರಾಯ ನೀಡಲು ಆರಾರು ತಿಂಗಳು ತೆಗೆದುಕೊಂಡು ಅಮಾಯಕರನ್ನು ಲಂಚಕ್ಕಾಗಿ ಪೀಡಿಸುವ ಅಧಿಕಾರಿಗಳು ಹೀಗೆ ಎಲ್ಲ ನಿಯಮ ಬಾಹಿರ ಕೃತ್ಯಗಳಿಗೆ ಈ ವಿಭಾಗ ಮೂಲ ಸ್ಥಾನ.
ಇವೆಲ್ಲ ನಿಯಮ ಭಾಹಿರ ವಾಗಿ ಕಂಡರೂ ಇಲ್ಲಿನ ಎಲ್ಲಾ ಉಲ್ಲಂಘನೆಗಳೂ ನಿಯಮಾನುಸಾರವಾಗಿ ನಡೆಯುತ್ತೆ. ಏಕೆಂದರೆ ಪ್ರತಿ ನಿಯಮ ರೂಪಿಸುವಾಗಲೂ ತಮ್ಮ ಅನುಕೂಲಕ್ಕಾಗಿ "ವಿಶೇಷ ಪ್ರಕರಣ" ಎಂಬ ಕಳ್ಳ ಮಾರ್ಗವನ್ನು ರೂಪಿಸಿಕೊಂಡಿದ್ದಾರೆ. ಎಲ್ಲಾ ನಿಯಮಗಳಿಗೂ ಒಂದು ಅಪವಾದವಿರುತ್ತದೆ. ಅದರ ಅನೈತಿಕ ಉಪಯೋಗ ಮಾಡಿಕೊಳ್ಳುವುದು ಇಲ್ಲಿನ ಪರಿಪಾಟ.
ಫೈಲ್ ಪೆಂಡೆಂನ್ಸಿ, ವಿದ್ಯುನ್ಮಾನ ಹಾಜರಾತಿ ವ್ಯವಸ್ಥೆ ಇತ್ಯಾದಿ ಇದ್ದರೂ ಅವನ್ನು "ವಿಶೇಷ ಪ್ರಕರಣ" ಎಂದು ಪರಿಗಣಿಸಿ,ಅವನ್ನು ಕಂಡರೂ ಕಾಣದಂತೆ ನಟಿಸುವ ಇಲಾಖಾ ಮುಖ್ಯಸ್ಥರು . ಒಟ್ಟಾರೆ ಸೇವಾ ನಿಯಮಗಳನ್ನ ರೂಪಿಸುವ ಈ ಇಲಾಖೆ ಕರ್ನಾಟಕದ ಆಡಳಿತ ವ್ಯವಸ್ಥೆಯ ನೈತಿಕ ಅಧಪತನವನ್ನು ಬಿಂಬಿಸುತ್ತದೆ. ನಾಗರಿಕ ಸಮಾಜಕ್ಕೆ ಕಪ್ಪುಚುಕ್ಕೆ ಯಂತಿರುವ ಈ ವಿಭಾಗವನ್ನು ಮುಚ್ಚಿ ಇಲ್ಲಿನ ಅನಕ್ಷರಸ್ತ ಪ್ರಮೋಟಿಗಳನ್ನು ಒದ್ದೋಡಿಸಿ "ಸೇವಾನಿಯಮಗಳನ್ನು ರೂಪಿಸುವ ಕೆಲಸವನ್ನು ಒಂದು ವ್ಯವಸ್ತಿತವಾದ ಪರಿಣಿತ ಸಂಸ್ಥೆಗೋ, ಲೋಕಾಯುಕ್ತಕ್ಕೋ ವಹಿಸಿದರೆ ಕರ್ನಾಟಕದಲ್ಲಿ ಬ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲಗೊಳಿಸಬಹುದು.
( "ಅಣ್ಣಾ ಹಜಾರೆ "ಯವರ ಬ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಬೆಂಬಲವಾಗಿ ಈ ಲೇಖನ ಪ್ರಕಟಿಸಲಾಗಿದೆ.)
Team Hazare v/s Govt of Karnataka
( "ಅಣ್ಣಾ ಹಜಾರೆ "ಯವರ ಬ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಬೆಂಬಲವಾಗಿ ಈ ಲೇಖನ ಪ್ರಕಟಿಸಲಾಗಿದೆ.)
Team Hazare v/s Govt of Karnataka
this is the secretariat pigs way to make money...
ReplyDelete